ಮೈಸೂರು

ವಿ.ವಿ.ಮೊಹಲ್ಲಾ ವ್ಯಾಪ್ತಿಯಲ್ಲಿ ಸ್ಮಾರ್ಟ್ ಮೀಟರ್ ಗಳ ಅಳವಡಿಕೆ

ಮೈಸೂರು. ಜ.1:- ವಿ.ವಿ ಮೊಹಲ್ಲಾ ಉಪವಿಭಾಗ ವ್ಯಾಪ್ತಿಯ ಗೋಕುಲಂ, ಮಹದೇಶ್ವರ ಬಡಾವಣೆ, ಬೃಂದಾವನ ಬಡಾವಣೆ, ಒಂಟಿಕೊಪ್ಪಲ್, ಪಡುವಾರಹಳ್ಳಿ ಹಾಗೂ ಜಯಲಕ್ಷ್ಮೀಪುರಂ ಪ್ರದೇಶದ ವಸತಿ / ವಾಣಿಜ್ಯ ವಿದ್ಯುತ್ ಸ್ಥಾವರಗಳಿಗೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಯಮಿತ ನಿಗಮ ವತಿಯಿಂದ ಸ್ಮಾರ್ಟ್ ಮೀಟರ್ ಗಳನ್ನು ಅಳವಡಿಸಲಾಗಿದೆ.
ಈ ಪ್ರದೇಶಗಳಲ್ಲಿನ ವಿದ್ಯುತ್ ಗ್ರಾಹಕರಿಗೆ ಜನವರಿ 2021 ರ ಮಾಹೆಯಿಂದ ಪ್ರತಿ ತಿಂಗಳ 3ನೇ ತಾರೀಖಿನಂದು ಮಾಸಿಕಬಿಲ್ಲನ್ನು ನೊಂದಾಯಿತ ಗ್ರಾಹಕರ ಮೊಬೈಲ್ ಸಂಖ್ಯೆಗೆ ರವಾನಿಸಲಾಗುವುದು. ಗಾಹಕರು ಪ್ರತಿ ತಿಂಗಳು 3ನೇ ತಾರೀಖಿನಂದು ಎಸ್.ಎಂ.ಎಸ್ ಮುಖೇನ ವಿದ್ಯುತ್ ಬಿಲ್ಲು ಮಾಹಿತಿ ಸ್ವೀಕರಿಸದೇ ಇದ್ದಲ್ಲಿ ಖುದ್ದಾಗಿ ವಿ.ವಿ ಮೊಹಲ್ಲಾ ಉಪವಿಭಾಗಕ್ಕೆ ಭೇಟಿ ನೀಡಿ ಪಡೆಯಬಹುದು, ತಮ್ಮ ಸರಿಯಾದ ಮೊಬೈಲ್ ಸಂಖ್ಯೆಯನ್ನು ನೀಡಿ ನೋಂದಾಯಿಸಿ ಚಾವಿಸನಿನಿಗೆ ಸಹಕರಿಸಬೇಕೆಂದು ವಿ.ವಿ.ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

comments

Related Articles

error: