ದೇಶಪ್ರಮುಖ ಸುದ್ದಿ

ದೇಶದಲ್ಲಿ ಸತತ 12 ನೇ ದಿನದಲ್ಲಿ 25 ಸಾವಿರಕ್ಕಿಂತ ಕಡಿಮೆ ಹೊಸ ಕೊರೊನಾ ಪ್ರಕರಣ ಪತ್ತೆ: 23 ಸಾವಿರ ಮಂದಿ ಚೇತರಿಕೆ

ದೇಶ(ನವದೆಹಲಿ)ಜ.1:- ಕೊರೋನಾ ದೇಶಾದ್ಯಂತ ಹಾನಿಯನ್ನುಂಟುಮಾಡುತ್ತಿದೆ. ಕೊರೋನಾ ಸೋಂಕಿನ ಪ್ರಕರಣಗಳು ಮೊದಲಿಗಿಂತ ಕಡಿಮೆ ಬರುತ್ತಿದ್ದರೂ 12 ನೇ ದಿನದಲ್ಲಿ 25 ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ಮತ್ತು 21 ನೇ ದಿನದಲ್ಲಿ 30 ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಗಳಲ್ಲಿ, ಹೊಸದಾಗಿ 20,035 ಸೋಂಕಿತರು ಕಂಡು ಬಂದಿದ್ದಾರೆ. ಅದೇ ವೇಳೆ 256 ಮಂದಿ ಸಾವನ್ನಪ್ಪಿದರು. ಗುಡ್ ನ್ಯೂಸ್ ಏನೆಂದರೆ ಕೊನೆಯ ದಿನ 23,181 ರೋಗಿಗಳು ಕೊರೋನಾದಿಂದ ಚೇತರಿಸಿಕೊಂಡಿದ್ದಾರೆ.
ಆರೋಗ್ಯ ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ, ಭಾರತದಲ್ಲಿ ಒಟ್ಟು ಕೊರೋನಾ ಪ್ರಕರಣಗಳು 1 ಕೋಟಿ ಎರಡು ಲಕ್ಷ 86 ಸಾವಿರಕ್ಕೆ ಏರಿದೆ. ಈ ಪೈಕಿ ಒಂದು ಲಕ್ಷ 48 ಸಾವಿರ 994 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಕ್ರಿಯ ಪ್ರಕರಣಗಳು 2 ಲಕ್ಷ 54 ಸಾವಿರಕ್ಕೆ ಇಳಿದಿವೆ. ಈವರೆಗೆ ಒಟ್ಟು 98 ಲಕ್ಷ 83 ಸಾವಿರ ಮಂದಿ ಚೇತರಿಸಿಕೊಂಡಿದ್ದಾರೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪ್ರಕಾರ, ಡಿಸೆಂಬರ್ 31 ರ ವೇಳೆಗೆ ಕೊರೋನಾ ವೈರಸ್ ಗಾಗಿ ಒಟ್ಟು 17.3 ಮಿಲಿಯನ್ ಪರೀಕ್ಷೆಗಳನ್ನು ನಡೆಸಲಾಗಿದ್ದು, ಅದರಲ್ಲಿ 1 ಮಿಲಿಯನ್ ನ್ನು ನಿನ್ನೆ ಪರೀಕ್ಷಿಸಲಾಯಿತು. ದೇಶದಲ್ಲಿ ಸಕಾರಾತ್ಮಕ ದರವು ಶೇಕಡಾ 7 ರಷ್ಟಿದೆ. 33 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೋನಾ ಸಕ್ರಿಯ ಪ್ರಕರಣ 20,000 ಕ್ಕಿಂತ ಕಡಿಮೆ ಇದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: