ಕರ್ನಾಟಕಪ್ರಮುಖ ಸುದ್ದಿ

ಮುಂದಿನ ಚುನಾವಣೆ ಮೇಲೆ ಉಪಚುನಾವಣೆ ಫಲಿತಾಂಶ ಪರಿಣಾಮ ಬೀರುವುದಿಲ್ಲ : ದೇವೇಗೌಡ

ಹಾಸನ : ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆ ಫಲಿತಾಂಶಗಳು ಮುಂದಿನ ವಿಧಾನಸಭಾ ಚುನಾವಣೆಯ ಮೇಲೆ ಫಲಿತಾಂಶ ಬಿರುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್‍.ಡಿ.ದೇವೇಗೌಡ ಹೇಳಿದ್ದಾರೆ.

ಹೊಳೆನರಸೀಪುರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ಯಾವ ರೀತಿ ನಡೆಯಿತು, ಎಷ್ಟರ ಮಟ್ಟಿಗೆ ಹಣದ ಹೊಳೆ ಹರಿಯಿತು ಎಂಬುದು ಎಲ್ಲರಿಗೂ ಎಲ್ಲರಿಗೂ ಗೊತ್ತಿರುವ ವಿಚಾರ ಎಂದರು.

ಉತ್ತರಪ್ರದೇಶದ ಮಾದರಿಯಲ್ಲಿ ಬಿಬಿಎಂಪಿ ಸುತ್ತಮುತ್ತ ಕಸಾಯಿಖಾನೆ ನಿಷೇಧ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಉತ್ತರ ಪ್ರದೇಶದ ಸ್ಥಿತಿಯೇ ಬೇರೆ, ರಾಜ್ಯದ ಸ್ಥಿತಿಯೇ ಬೇರೆಯಾಗಿದೆ ಎಂದರು.

ಅಮಾನತುಗೊಂಡಿರುವ ಜೆಡಿಎಸ್ ಬಂಡಾಯ ಶಾಸಕರ ಬಗ್ಗೆ ಪಕ್ಷದ ಶಿಸ್ತು ಸಮಿತಿ ಶೀಘ್ರ ತೀರ್ಮಾನ ಕೈಗೊಳ್ಳಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

(ಎನ್‍.ಬಿ.ಎನ್‍)

Leave a Reply

comments

Related Articles

error: