ಮೈಸೂರು

ಸಾಲಭಾದೆ ತಾಳಲಾರದೇ ರೈತ ನೇಣಿಗೆ ಶರಣು

ಸಾಲಭಾದೆ ತಾಳಲಾರದೆ ರೈತನೋರ್ವ  ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ರೈತನನ್ನು  ಕೆ.ಆರ್.ನಗರ ಮಂಡಿಗನಹಳ್ಳಿ ಗ್ರಾಮದ ನಿವಾಸಿ ಸ್ವಾಮಿಗೌಡ (58) ಎಂದು ಗುರುತಿಸಲಾಗಿದೆ. ಈತ ಮೂರು ಎಕರೆ ಜಮೀನನ್ನು ಹೊಂದಿದ್ದು, ಕೊಳವೆ ಬಾವಿಯನ್ನು ಕೊರೆಸಲು ಮೂರು ಲಕ್ಷ ರೂ. ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಆದರೆ ಸಾಲ ಮರುಪಾವತಿಸಲಾಗದೇ  ಜಮೀನಿನಲ್ಲಿರುವ  ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: