ಕರ್ನಾಟಕಪ್ರಮುಖ ಸುದ್ದಿ

ಹೊಸ ವರ್ಷಕ್ಕೆ ಶುಭಕೋರಿದ ಸ್ಯಾಂಡಲ್ ವುಡ್ ತಾರೆಯರು

ಬೆಂಗಳೂರು,ಜ.1-ದೇಶದೆಲ್ಲೆಡೆ ಹೊಸ ವರ್ಷದ ಸಂಭ್ರಮ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ತಾರೆಯರು ಶುಭಕೋರಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ನವರಸ ನಾಯಕ ಜಗ್ಗೇಶ್, ನಟರಾದ ಸುದೀಪ್, ರಕ್ಷಿತ್ ಶೆಟ್ಟಿ ಸೇರಿದಂತೆ ಅನೇಕರು ಶುಭಕೋರಿದ್ದಾರೆ.

ದರ್ಶನ್ ಅವರು, ಹೊಸ ವರ್ಷ ಎಂದ ಮೇಲೆ ಏನೋ ಒಂದು ಹೊಸ ಭರವಸೆ ನಮ್ಮಲ್ಲಿ ಇರುತ್ತದೆ. ಹೊಸ ವರ್ಷ ಒಳಿತನ್ನೇ ತರಲಿ ಎಂದು ಆಶಿಸುತ್ತೇನೆ. ಆದಷ್ಟು ಬೇಗ ಈ ಕೋವಿಡ್ ಮಹಾಮಾರಿ ನಮ್ಮ ಜೀವನದಿಂದ ದೂರವಾಗಲಿ. ಎಲ್ಲರ ಮನೆ ಮನಗಳಲ್ಲಿ ಹೊಸ ವರ್ಷವೂ ಸುಖ ಶಾಂತಿ ನೆಮ್ಮದಿ ನೆಲೆಸುವಂತೆ ಮಾಡಲಿ. ಎಲ್ಲರಿಗೂ ಆಂಗ್ಲೋ ಕ್ಯಾಲೆಂಡರ್ ಅನುಸಾರವಾದ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರು, ಈ ನೆಲ.. ಈ ಜನ. ನಿರ್ಮಲ…ರಕ್ಷಣೆಯ ಹೊಣೆ ನಮ್ಮದು.. ನದಿಗಳು ನಮಗೇ ಜೀವ ಜಲ..’ ಎನ್ನುವ ಸಾಲುಗಳಿಂದ ಪ್ರಾರಂಭವಾಗುವ ಹಾಡನ್ನು ಹಾಡಿ ಶೇರ್ ಮಾಡುವ ಮೂಲಕ ಅದ್ಭುತವಾದ ಸಂದೇಶದೊಂದಿಗೆ ಪುನೀತ್ ರಾಜ್ ಕುಮಾರ್ ವಿಭಿನ್ನವಾಗಿ ವಿಶ್ ಮಾಡಿದ್ದಾರೆ. ‘2020 ನಮ್ಮೆಲರ ಸುತ್ತಮುತ್ತ ನಡೆದ ಘಟನೆ. ಹಾಗೂ ನಾವೆಲ್ಲರು ಅನುಭವಿಸಿದ ತೊಂದರೆಯನ್ನು ಬದಿಗಿಟ್ಟು, ನೆಗೆಟಿವಿಟಿಯನ್ನೆಲ್ಲಾ ಪಕ್ಕಕ್ಕೆ ಇಟ್ಟು, ಈ ವರ್ಷ 2021 ನಾವು ನಮ್ಮ ಕುಟುಂಬದ ಮೇಲೆ, ನಮ್ಮಗಳ ಮೇಲೆ ಹಾಗೂ ಪ್ರಕೃತಿ ಮೇಲೆ ಗಮನವಿಟ್ಟುಕೊಂಡು ನಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡೋಣ. ಈ ವರ್ಷ ನಿಮಗೆ ನಮಗೆ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಭಗವಂತನಲ್ಲಿ ಕೇಳಿಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.

ಜಗ್ಗೇಶ್ ಅವರು, ಹೊಸ ವರ್ಷದ ಮೊದಲ ಮೆಟ್ಟಿಲ ದಿನದ ಶುಭಾಷಯಗಳು. ಇಂದಿನಿಂದ ನಿಮ್ಮ ಬಾಳು ಹಸನಾಗಿ ಮನಸ್ಸಿನ ಸಕಲ ಇಷ್ಟಾರ್ಥ ನೆರವೇರಲಿ, ಶುಭಮಸ್ತು ಎಂದು ಟ್ವೀಟ್ ಮಾಡಿದ್ದಾರೆ.

ನಟ ಕಿಚ್ಚ ಸುದೀಪ್, ‘2020 ನಾವು ಬದುಕುಳಿದ ವರ್ಷ. ಮತ್ತು ನಮಗೆ ದೊಡ್ಡ ಪಾಠ ಕಲಿಸಿದ ವರ್ಷ. ಕಾಲ ನಮಗೆ ಏನು ಕೊಟ್ಟಿದೆಯೋ ಅದರ ಬೆಲೆಯನ್ನು ನಮಗೆ ತಿಳಿಸಿಕೊಟ್ಟ ವರ್ಷ. ಈ ಎಲ್ಲಾ ಪಾಠಗಳು 2021ಅನ್ನು ಉತ್ತಮ ವರ್ಷವನ್ನಾಗಿ ಮಾಡಲಿದೆ. ಕಷ್ಟಕಾಲವನ್ನು ಒಪ್ಪಿಕೊಂಡು ಉತ್ತಮ ಕೆಲಸಗಳನ್ನು ಮಾಡಿ. 2021 ಹೊಸ ವರ್ಷಕ್ಕೆ ಶುಭಾಶಯಗಳು’ ಎಂದಿದ್ದಾರೆ.

“ಹೊಸ” ಎನ್ನುವ ಪದದಲ್ಲೇ ಹೊಸತೊಂದು ಆರಂಭವಿದೆ, ಹೊಸತೊಂದು ಕಲ್ಪನೆಯಿದೆ, ಹೊಸತೊಂದು ಉತ್ಸಾಹವಿದೆ, ಹೊಸತೊಂದು ಭರವಸೆಯಿದೆ. ಹಾಗಾಗಿ ಈ ಹೊಸ ವರ್ಷ ನಿಮಗೆಲ್ಲಾ ಹೊಸ ಬದುಕೊಂದನ್ನು ಹೊತ್ತು ತರಲಿ ಎಂದು ಆಶಿಸುತ್ತಾ, ನಾಡಿನ ಸಮಸ್ತ ಜನತೆಗೆ ಹಾಗೂ ನನ್ನ ಪ್ರೀತಿಯ ಅಭಿಮಾನಿ ಬಳಗಕ್ಕೆ ಹೊಸ ವರ್ಷದ ವಿಶೇಷ ಶುಭಾಶಯಗಳು ಎಂದು ಗೋಲ್ಡನ್ ಸ್ಟಾರ್ ಗಣೇಶ್ ಶುಭಕೋರಿದ್ದಾರೆ.(ಎಂ.ಎನ್)

 

Leave a Reply

comments

Related Articles

error: