ಮೈಸೂರು

ವಾರಸುದಾರರ ಮನೆಗೆ ತೆರಳಿ ಚಿನ್ನಾಭರಣ ಹಿಂದಿರುಗಿಸಿ ವಿಶಿಷ್ಟ ರೀತಿಯಲ್ಲಿ ಹೊಸ ವರ್ಷಾಚರಣೆಯನ್ನು ಆಚರಿಸಿದ ಪೊಲೀಸರು


ಮೈಸೂರು,ಜ.1:- ಮೈಸೂರು ನಗರ ಪೊಲೀಸರು, ಸ್ವತ್ತು ಕಳುವು ಪ್ರಕರಣಗಳಲ್ಲಿ ಪತ್ತೆಯಾದ ಸ್ವತ್ತುಗಳನ್ನು ನ್ಯಾಯಾಲಯದ ಅನುಮತಿ ಪಡೆದು ವಾರಸುದಾರರ ಮನೆಗಳಿಗೆ ತೆರಳಿ ಚಿನ್ನಾಭರಣ ಮತ್ತು ನಗದನ್ನು ಹಿಂತಿರುಗಿಸುವ ಮೂಲಕ 2021ನೇ ಹೊಸ ವರ್ಷಾಚರಣೆಯನ್ನು ವಿಶೇಷವಾಗಿ ಆಚರಿಸಿದರು.

ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ನ ಕಳುವು ಪ್ರಕರಣಕ್ಕೆ ಸಂಬಂಧಪಟ್ಟಂತೆ
ರೇಖಾ ಅವರ ಮನೆಗೆ ತೆರಳಿ ವಶಪಡಿಸಿಕೊಂಡಿರುವ 2,13,000ರೂ. ಮೌಲ್ಯದ 40 ಗ್ರಾಂ ತೂಕದ
ಚಿನ್ನದ ಆಭರಣಗಳು ಮತ್ತು 200 ಗ್ರಾಂ ತೂಕದ ಬೆಳ್ಳಿ ಪದಾರ್ಥಗಳನ್ನು ಹಿಂತಿರುಗಿಸಿರುತ್ತಾರೆ.
ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ನ ಕಳುವು ಪ್ರಕರಣಕ್ಕೆ ಸಂಬಂಧಪಟ್ಟಂತೆ
ಮೊಹಮ್ಮದ್ ಉಕೈಲ್ ಶಿರೂರ್ ರವರ ಮನೆಗೆ ತೆರಳಿ ವಶಪಡಿಸಿಕೊಂಡಿರುವ 10,00,000 ರೂ.
ಮೌಲ್ಯದ 225 ಗ್ರಾಂ ತೂಕದ ಚಿನ್ನಾಭರಣಗಳನ್ನು ಹಿಂತಿರುಗಿಸಲಾಯಿತು. ಈ ದಿನ ಮೊಹಮ್ಮದ್
ಉಕೈಲ್ ಶಿರೂರ್ ಅವರು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದು, ಕಳೆದುಕೊಂಡಿದ್ದ ಮಂಗಳ ಸೂತ್ರವನ್ನು ಹಿಂದಿರುಗಿಸಿದ್ದು, ಇದರಿಂದ ಸಂತೋಷಗೊಂಡು ಪೊಲೀಸರಿಗೆ ಸಿಹಿಯನ್ನು ನೀಡಿ ಹೊಸ ವರ್ಷದ ಶುಭಾಶಯವನ್ನು ಕೋರಿದ್ದಾರೆ.
ನರಸಿಂಹರಾಜ ಪೊಲೀಸ್ ಠಾಣಾ ವ್ಯಾಪ್ತಿಯ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಫಿರ್ಯಾದಿ
ಪಿ. ಅಭಿಷೇಕ್‍ ಅವರಿಗೆ ಎ.ಸಿ.ಪಿ. ನರಸಿಂಹರಾಜ ವಿಭಾಗದ ಕಛೇರಿಯಲ್ಲಿ ವಶಪಡಿಸಿಕೊಂಡಿದ್ದ ನಗದು ಹಣ 2,79,000ರೂ. ಹಿಂದಿರುಗಿಸಲಾಯಿತು.
ಈ ವಿಶೇಷ ಕಾರ್ಯದಲ್ಲಿ ಡಿ.ಸಿ.ಪಿ.ರವರಾದ ಗೀತಪ್ರಸನ್ನ, ಎ.ಸಿ.ಪಿ. ಎಂ.
ಶಿವಶಂಕರ್, ಪೊಲೀಸ್ ಇನ್ಸಪೆಕ್ಟರ್ ಗಳಾದ ಅಜರುದ್ದೀನ್, ನಾರಾಯಣಸ್ವಾಮಿ,
ಡಿ.ಎಸ್.ಸುರೇಶ್‍ಕುಮಾ ಪಾಲ್ಗೊಂಡಿದ್ದು, ಒಟ್ಟು 14,92,000ರೂ. ಮೌಲ್ಯದ 265 ಗ್ರಾಂ
ಚಿನ್ನಾಭರಣ, 200 ಗ್ರಾಂ ಬೆಳ್ಳಿ ಪದಾರ್ಥಗಳು ಹಾಗೂ 2,79,000ರೂ. ನಗದು ಹಣವನ್ನು
ವಾರಸುದಾರರಿಗೆ ಹಿಂದಿರುಗಿಸಲಾಯಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: