ಮೈಸೂರು

ವಕೀಲರ ಕಚೇರಿಯೊಳಗೆ ನುಗ್ಗಿದ ಕಳ್ಳರು ಬರಿಗೈಲಿ ವಾಪಸ್

ಮೈಸೂರಿನ ಧನ್ವಂತ್ರಿ ರಸ್ತೆಯಲ್ಲಿರುವ ವಕೀಲರಿಬ್ಬರ ಕಚೇರಿಗೆ ನುಗ್ಗಿದ ಕಳ್ಳರು ಬರಿಗೈಲಿ ವಾಪಸ್ಸಾದ ಘಟನೆ ಬುಧವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಧನ್ವಂತ್ರಿ ರಸ್ತೆಯಲ್ಲಿನ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವಕೀಲರಾದ ಎಚ್.ಅರವಿಂದ ಮತ್ತು ಪಿ.ಎಂ.ಶಿವಕುಮಾರ್ ಎಂಬವರ ಕಚೇರಿಯೊಳಗೆ ಏನಾದರೂ ಸಿಗಬಹುದೆಂಬ ಮಹದಾಸೆಯಿಂದ ಮಧ್ಯರಾತ್ರಿ ಒಳನುಗ್ಗಿದ ಕಳ್ಳರು ಅಲ್ಲಿರುವ ಡ್ರಾವರ್ ಮತ್ತು ಕಪಾಟುಗಳನ್ನು ಜಾಲಾಡಿ ಕಡತಗಳನ್ನು ಚಲ್ಲಾಪಿಲ್ಲಿಯಾಗಿಸಿದ್ದಾರೆ. ಅಲ್ಲಿ ಅವರಿಗೆ   ಕಾಗದ ಪತ್ರಗಳ ಹೊರತಾಗಿ ಬೇರೇನೂ ದೊರಕಿಲ್ಲ. ಏನೂ ದೊರಕಿಲ್ಲದ ಕಾರಣ ಅಲ್ಲೇ ಪಕ್ಕದಲ್ಲಿದ್ದ ಟೈಲರ್ ಅಂಗಡಿಯೊಳಗೆ ನುಗ್ಗಿದ ಕಳ್ಳರು ಕಳ್ಳತನಕ್ಕೆ ಪ್ರಯತ್ನಿಸಿದ್ದು, ಅಲ್ಲಿಯೂ ಏನೂ ಸಿಗದೆ ಬರಿಗೈಲಿ ತೆರಳಿದ್ದಾರೆ ಎನ್ನಲಾಗಿದೆ. ಬೆಳಿಗ್ಗೆ ಕಚೇರಿಗೆ ಆಗಮಿಸಿದ ವೇಳೆ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿರುವುದನ್ನು ಗಮನಿಸಿದ ವಕೀಲರು ದೇವರಾಜ ಅರಸು ಠಾಣೆಗೆ ತೆರಳಿ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

comments

Related Articles

error: