ಮನರಂಜನೆ

ನಿರ್ದೇಶಕ ಆನಂದ ರೈ ಮುಂದಿನ ಚಿತ್ರಕ್ಕೆ ನಾಯಕಿ ಯಾರು ?

ಆನಂದ್ ರೈ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದು,ಆ ಚಿತ್ರಕ್ಕ ಶಾರುಖ್ ಖಾನ್ ನಾಯಕರಾಗಿದ್ದಾರೆ. ಬಹಳ ಕುತೂಹೂಲ ಮೂಡಿಸಿರುವ ಈ ಚಿತ್ರಕ್ಕೆ ಕತ್ರಿನಾ ಕೈಫ್ ಇಲ್ಲವೇ ದೀಪಿಕಾ ಪಡುಕೋಣೆ ನಾಯಕಿ ಪಾತ್ರ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ದೀಪಿಕಾ ಪಡುಕೋಣೆ ಸಂಜಯ್ ಲೀಲಾ ಬನ್ಸಾಲಿಯ ಪದ್ಮಾವತಿ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರಿಂದ ಶಾರುಖ್ ಖಾನ್ ಚಿತ್ರದಲ್ಲಿ ನಟಿಸಲು ಸಾಧ್ಯವಿಲ್ಲ ಎಂದಿದ್ದಾರಂತೆ. ಆನಂದ್ ರೈ ಚಿತ್ರದ ಕಾನ್ಸೆಪ್ಟ್ ದೀಪಿಕಾಗೆ ಇಷ್ಟವಾಗಿದೆ. ಆದರೆ ಡೇಟ್ಸ್ ಹೊಂದಾಣಿಕೆ ಸಮಸ್ಯೆಯಿಂದ ಈ ಸಿನಿಮಾದಲ್ಲಿ ನಟಿಸಲು ಸಾಧ್ಯವಿಲ್ಲ ಎನ್ನುತ್ತಿದ್ದಾಳಂತೆ ದೀಪಿಕಾ. ಆದರೆ ಶಾರುಖ್ ಗೆ  ನಾಯಕಿ ಯಾರು ಎಂಬುದನ್ನು ನಿರ್ದೇಶಕ ಆನಂದ್ ರೈ ಇನ್ನೂ ಬಹಿರಂಗಪಡಿಸಿಲ್ಲ. ಶಾರುಖ್ ನಾಯಕಿ ಯಾರು ಎಂಬುದರ ಕುರಿತು ಹಲವು ವದಂತಿಗಳು ಕೇಳಿ ಬರುತ್ತಿವೆ.

ಈ ಸಿನಿಮಾದಲ್ಲಿ ಶಾರುಖ್ ಕುಬ್ಜನ ಪಾತ್ರ ಮಾಡಲಿದ್ದು, ವರ್ಷದ ಕೊನೆಯಲ್ಲಿ ಸಿನಿಮಾ ಶೂಟಿಂಗ್ ಸೆಟ್ಟೇರಲಿದೆಯಂತೆ. ಮುಂದಿನ ವರ್ಷದ ಕ್ರಿಸ್ ಮಸ್ ವೇಳೆಗೆ ಸಿನಿಮಾ ಬಿಡುಗಡೆಯಾಗಲಿದೆ ಎಂದಿದ್ದಾರಂತೆ ಆನಂದ್ ರೈ. ಆದರೆ ಶಾರುಖ್  ನಾಯಕಿ ಯಾರಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: