ಮೈಸೂರು

ಯೋಗ ಟೀಚರ್ ಟ್ರೈನಿಂಗ್ ಸರ್ಟಿಫಿಕೇಟ್ ಕೋರ್ಸ್ ಅರ್ಜಿ ಆಹ್ವಾನ

ಮೈಸೂರು,ಜ.2:- ಪರಮಹಂಸ ಯೋಗ ಮಹಾವಿದ್ಯಾಲಯ – ಎಸ್.ಪಿ.ಎಂ. ಟ್ರಸ್ಟ್ ಆಶ್ರಯದಲ್ಲಿ ಯೋಗದ ಮಹತ್ವ ಸಮಾಜದ ಎಲ್ಲ ಜನರಿಗೂ ತಲುಪಬೇಕೆಂಬ ಉದ್ದೇಶದಿಂದ ಉತ್ತಮ ಯೋಗ ಶಿಕ್ಷಕರ ನಿರ್ಮಾಣಕ್ಕಾಗಿ 03 ತಿಂಗಳ ಅವಧಿಯ ಯೋಗ ಟೀಚರ್ ಟ್ರೈನಿಂಗ್ ಸರ್ಟಿಫಿಕೇಟ್ ಕೋರ್ಸ್ – YTICC ಕೋರ್ಸ್ಗಾಗಿ ಅರ್ಜಿಗಳನ್ನು ಕರೆಯಲಾಗಿದೆ ಎಂದು ಶಿವಪ್ರಕಾಶ್ ಗುರೂಜಿ ತಿಳಿಸಿದರು,
ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು YTTCC ಯೋಗ ಕೋರ್ಸ್ನಲ್ಲಿ ಯೋಗಾಸನ , ಯೋಗ ಥೆರಪಿ , ಪ್ರಾಣಾಯಾಮ , ಧ್ಯಾನ , ಮುದ್ರಾ ಥೆರಪಿ , ಯೋಗಶಾಸ್ತ್ರ , ಪತಂಜಲಿ ಯೋಗ ಸೂತ್ರ , ಶರೀರಶಾಸ್ತ್ರ , ಫಿಸಿಯಾಲಜಿ , ಆಹಾರ ಕ್ರಮ , ಮನೆ ಮದ್ದು , ಜೀವನ ಕೌಶಲ್ಯ , ಅಷ್ಟಾಂಗ ಯೋಗದ ಸಂಪೂರ್ಣ ಮಾಹಿತಿ ಹಾಗೂ ಇತ್ಯಾದಿ ವಿದ್ಯೆಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ತರಬೇತುದಾರರಾದ ಯೋಗ ತಜ್ಞರು ಹಾಗೂ ಪರಿಣಿತ ವೈದ್ಯರ ಮೂಲಕ ಕಲಿಯುವ ಮತ್ತು ಕಲಿಸುವಂತಹ ವಿಶೇಷ ತರಬೇತಿ ನೀಡಲಾಗುವುದು ಎಂದರು.
ಯೋಗ ತರಬೇತಿ ಪಡೆದ YTTCC ಅಭ್ಯರ್ಥಿಗಳಿಗೆ SGS ಇಂಟರ್ ನ್ಯಾಷನಲ್ ಯೋಗ ಫೌಂಡೇಷನ್ ಕಾಲೇಜು ಅಂಡ್ ರಿಸರ್ಚ್ ಸೆಂಟರ್ , ಬೆಂಗಳೂರು ಇವರ ಮಾನ್ಯತೆಯೊಂದಿಗೆ ಪ್ರಮಾಣ ಪತ್ರ ಹಾಗೂ ಯೋಗಾಚಾರ್ಯ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು.
ತರಬೇತಿ ಪಡೆದವರಿಗೆ ಉತ್ತಮ ಉದ್ಯೋಗ ಅವಕಾಶಗಳು ಸಹ ಲಭ್ಯವಿರುತ್ತದೆ . YTTCC ಯೋಗ ತರಗತಿಗಳನ್ನು 10-01-2021 ರಿಂದ ವಾರದಲ್ಲಿ 2 ದಿನ ಶನಿವಾರ ಅಥವಾ ಮತ್ತು ಭಾನುವಾರಗಳಂದು ಎಲ್ಲರಿಗೂ ಅನುಕೂಲವಾಗಬೇಕೆಂಬ ಉದ್ದೇಶದಿಂದ 2 ಬ್ಯಾಚ್ಗಳಲ್ಲಿ ಅಂದರೆ ಬೆಳಿಗ್ಗೆ 6.30 ರಿಂದ 9.30 ಅಥವಾ ಸಂಜೆ 5 ರಿಂದ 8 ರವರೆಗೆ ವ್ಯವಸ್ಥೆ ಮಾಡಲಾಗಿದೆ . ಯೋಗ ಶಿಕ್ಷಕರ ತರಬೇತಿಗೆ ಸೇರಲಿಚ್ಛಿಸುವವರು 08-02-2021ರ ಒಳಗಾಗಿ ನಿಗದಿತ ಅರ್ಜಿಯಲ್ಲಿ ತಮ್ಮ ಹೆಸರುಗಳನ್ನು ರಾಮಕೃಷ್ಣ ನಗರದಲ್ಲಿರುವ ಪರಮಹಂಸ ಯೋಗ ಮಹಾವಿದ್ಯಾಲಯದಲ್ಲಿ ಪ್ರತಿ ದಿನ ಸಂಜೆ 5 ರಿಂದ 8 ರ ಸಮಯದಲ್ಲಿ ನಿಗದಿತ ಅರ್ಜಿ ಫಾರಂನಲ್ಲಿ ನೋಂದಾಯಿಸಿಕೊಳ್ಳ ಬಹುದು ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: