ಮೈಸೂರು

ಶಶಿಶೇಖರ ದೀಕ್ಷಿತ್ ರಿಗೆ ಜಿಲ್ಲಾ ಬ್ರಾಹ್ಮಣ ಸಂಘದಿಂದ ಸನ್ಮಾನ

ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ ಬೆಟ್ಟದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ಆಗಮ ಶಾಸ್ತ್ರದ ವಿಷಯದಲ್ಲಿ ಗೌರವ ಡಾಕ್ಟರೇಟ್‌ ಪದವಿ ಪಡೆದಿರುವುದರಿಂದ  ಮೈಸೂರು ನಗರ ಹಾಗೂ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿಟಿ ಪ್ರಕಾಶ್ ಶಶಿಶೇಖರ ದೀಕ್ಷಿತರನ್ನು ಚಾಮುಂಡಿಬೆಟ್ಟ ದೇವಸ್ಥಾನದ ಮುಂಭಾಗದಲ್ಲಿ ಸನ್ಮಾನಿಸಿದರು.

ಬಳಿಕ ಮಾತನಾಡಿದ ಅವರು ಇದು ನಮ್ಮ ಸಮಾಜದ ಗರಿಮೆ. ಇತಿಹಾಸದಲ್ಲಿ ಮತ್ತು ನಮ್ಮ ಪೂರ್ವ ಕಾಲದಿಂದಲೂ ಬ್ರಾಹ್ಮಣ ತತ್ವವನ್ನು ಮತ್ತು ಆಧ್ಯಾತ್ಮ,ಹಾಗೂ ಹಿಂದು ಸಂಪ್ರದಾಯಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದು ಇದರ ಪ್ರೇರಣೆಯಂತೆ ಆಗಮ ಶಾಸ್ತ್ರದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ನಿಟ್ಟಿನಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿರುವುದು ರಾಜ್ಯಕ್ಕೆ ಸಂದ ಗೌರವ ಎಂದು ಅಭಿಪ್ರಾಯಪಟ್ಟರು.
ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದ ದೀಕ್ಷಿತ್, ವಂಶ ಪಾರಂಪರ್ಯವಾಗಿ ನಮ್ಮ ಅಧಿದೇವತೆಯಾದ ಚಾಮುಂಡೇಶ್ವರಿ ತಾಯಿಯ ಪೂಜೆ ಮಾಡುತ್ತಿರುವುದು ನಮ್ಮ ಸೌಭಾಗ್ಯ. ಆಗಮ ಶಾಸ್ತ್ರ ದಲ್ಲಿ ಇನ್ನು ತುಂಬಾ ಜನ ಪಂಡಿತರಿದ್ದು ಇದು ಹಿರಿಯರಿಗೆ ಮತ್ತು ನಮ್ಮ ಕುಟುಂಬದವರಿಗೆ ಸಂದ ಗೌರವವಾಗಿದೆ. ಮುಂದೆಯೂ ಕೂಡ ನಮ್ಮ ಕುಟುಂಬ ಆಗಮ ಶಾಸ್ತ್ರದಲ್ಲಿ ಪರಿಣಿತಿ ಹೊಂದುವುದಷ್ಟೇ ಅಲ್ಲ.  ಬ್ರಾಹ್ಮಣ ಸಮಾಜದ ಪ್ರತಿಯೊಬ್ಬ ಯುವಕರು ಕೂಡ ಈ ನಿಟ್ಟಿನಲ್ಲಿ ಚಿಂತನೆ ಮಾಡಬೇಕು ಎಂದರು.

ವಿಪ್ರ ಯುವವೇದಿಕೆಯ ಕಾರ್ಯದರ್ಶಿ ವಿಕ್ರಮ್ ಅಯ್ಯಂಗಾರ್,ಜಯಕರ್ನಾಟಕ ಯುವ ಅಧ್ಯಕ್ಷ ಅಜಯ್ ಶಾಸ್ತ್ರಿ,   ಪ್ರಜ್ಞಾವಂತ ನಾಗರೀಕ ವೇದಿಕೆಯ ಅಧ್ಯಕ್ಷ ಕಡಕೋಳ ಜಗದೀಶ್, ಶ್ರೀಕಾಂತ್ ಕಶ್ಯಪ, ಮೈಕ್ ಚಂದ್ರು,ರಾಜಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: