ಕರ್ನಾಟಕಪ್ರಮುಖ ಸುದ್ದಿಮೈಸೂರು

ಬೆಂಗಳೂರು ಉದ್ಯಮಿ ಮೈಸೂರು ಲಾಡ್ಜ್ ನಲ್ಲಿ ನಿಗೂಢವಾಗಿ ಸಾವು

ಮೈಸೂರು, ಜ.3:- ಬೆಂಗಳೂರು ಉದ್ಯಮಿಯೋರ್ವರು ಮೈಸೂರಿನ ಲಾಡ್ಜ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತರನ್ನು ಉಮಾಶಂಕರ್ (45) ಎಂದು ಹೇಳ ಲಾಗಿದೆ. ಜೊತೆಯಲ್ಲಿ ಬಂದಿದ್ದ ಪತ್ನಿ ಕವಿತಾ ನಾಪತ್ತೆ ಯಾಗಿದ್ದಾರೆ.
ಲಾಡ್ಜ್‌ನಲ್ಲಿ ಇನ್ಸುಲಿನ್ ಹಾಗೂ ಔಷಧಿ ಬಾಟಲ್‌ ಡೆತ್‌ನೋಟ್ ಪತ್ತೆ ಯಾಗಿದ್ದು, ಪತಿ ಪತ್ನಿ ಇಬ್ಬರು ಸಹಿ ಮಾಡಿರುವ ಡೆತ್‌ನೋಟ್ ಇದಾಗಿದೆ. ಅತಿಯಾದ ಇನ್ಸುಲಿನ್‌ನಿಂದ್ ಉಮಾಶಂಕರ್ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಉಮಾಶಂಕರ್ ಸಾಕಷ್ಟು ಸಾಲ ಮಾಡಿದ್ದರು.
ಸಾಲಕ್ಕಾಗಿ ಕೆಲವರು ಪೀಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ‌ನೋಟ್‌ ನಲ್ಲಿ ದಂಪತಿಗಳು ಬರೆದಿದ್ದಾರೆ ಎನ್ನಲಾಗಿದೆ. ನಾಪತ್ತೆಯಾಗಿರುವ ಪತ್ನಿ ಕವಿತಾಗಾಗಿ ಹುಡುಕಾಟ ನಡೆದಿದೆ.
ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: