ಮೈಸೂರು
ಎಸ್ ಸಿ ಎಸ್ ಟಿ ಮಹಿಳಾ ಸಹಕಾರ ಸಂಘದಿಂದ ಕ್ಯಾಲೆಂಡರ್ ಬಿಡುಗಡೆ
ಮೈಸೂರು, ಜ.4:- ಮೈಸೂರು ಜಿಲ್ಲಾ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಮಹಿಳಾ ವಿವಿದೊದ್ದೇಶ ಸಹಕಾರದಿಂದ 2021 ರ ನೂತನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಸಾಧನ ಸಂಸ್ಥೆಯ ವ್ಯವಸ್ಥಾಪಕರಾದ ಪ್ರಕಾಶ್ ಮಾತಾನಾಡಿ, ಮಹಿಳೆಯರು ಸಮಾನತೆಯಿಂದ. ಸ್ವಾವಲಂಬಿಯಾಗಿ ಬದುಕಿ ,ಜೊತೆಗೆ ತಾವು ಸಂಘದಿಂದ, ತೆಗೆದುಕೊಂಡ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಿದಲ್ಲಿ ಉಳಿದ ಮಹಿಳಾ ಸದಸ್ಯರಿಗೂ ಕೂಡ ಸಾಲ ನೀಡಿ ಅವರನ್ನು ಸ್ವಾವಲಂಬಿಯಾಗಿ ಬದುಕಲು ಅವಕಾಶ ಸಿಗುವಂತೆ ಆಗುತ್ತದೆ ಎಂದು ಮಹಿಳಾ ಸದಸ್ಯರಿಗೆ ಮಾಹಿತಿ ನೀಡಿದರು.
ಇನ್ನು ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಜೆ.ಗಾಯತ್ರಿ, ಕಾರ್ಯದರ್ಶಿ ಶಶಿರೇಖಾ,ಗೌತಮಿ ಬಂತೇಜಿ.ಅಂತರಸಂತೆ.
ವಂದನ ಬಿಕುನಿ.ನಾಗಪುರ್.ಸಂಸ್ಥೆಯ ವ್ಯವಸ್ಥಾಪಕರಾದ ಪ್ರಕಾಶ್, ಸಿಬ್ಬಂದಿ ಸಿದ್ಧಚಾರಿ ಆದಿಕರ್ನಾಟಕ ಸಹಕಾರ ಸಂಘದ ಅಧ್ಯಕ್ಷರಾದ ಶಿವಲಿಂಗಯ್ಯ, ಕಾಂಗ್ರೆಸ್ ನ ಡಿ ಸಿ ಸಿ ಸದಸ್ಯರಾದ ಪರಶಿವಮೂರ್ತಿ ಗೌರಿಗಾನವಿ ಕಂಪ್ಯೂಟರ್ ಕೇಂದ್ರದ ಪ್ರವೀಣ್ ಹೆಚ್ ಎಸ್ ,ಮತ್ತು ಮೀನರಾಜು,ನಿಂಗಯ್ಯ, ಚಿನ್ನಸ್ವಾಮಿ.ಕೆಂಪನಂಜು,ವಿಶ್ವಾಸ್ ,ಗಗನ ಪುಟ್ಟರಾಜು ಭಾಗಿಯಾಗಿದ್ದರು.(ಕೆ.ಎಸ್,ಎಸ್.ಎಚ್)