ಮೈಸೂರು

ಲೇಡಿ ಪೊಲೀಸ್ ಬಳಿ ಒದೆ ತಿಂದ ಕಾಮುಕ

ಹಾಸನ : ಸಿನಿಮಾ ವೀಕ್ಷಿಸುವಾಗ ಹುಡುಗಿಯನ್ನು ಚುಡಾಯಿಸಿದ ಕಾಮುಕ  ಯುವಕನೋರ್ವನಿಗೆ  ಸಾರ್ವಜನಿಕರು ಹಾಗೂ ಮಹಿಳಾ ಪೊಲೀಸ್  ಹಿಗ್ಗಾಮುಗ್ಗಾ ಒದೆ ನೀಡಿದ ಘಟನೆ  ಹಾಸನದ ಎಸ್ ಪಿಜಿ ಚಿತ್ರಮಂದಿರದಲ್ಲಿ ನಡೆದಿದೆ.

ಹಾಸನದ ಎಸ್.ಪಿ.ಜಿ ಚಿತ್ರಮಂದಿರದಲ್ಲಿ ಬೇಲೂರು ತಾಲೂಕಿನ ಹಳೆಬೀಡು ಮೂಲದ ಯುವಕನೋರ್ವ ಮಹಿಳೆಯರೊಂದಿಗೆ  ಅಸಭ್ಯವಾಗಿ ವರ್ತಿಸಿದ್ದಲ್ಲದೇ, ರೈಲ್ವೆ ಮಹಿಳಾ ಪೊಲೀಸ್  ಓರ್ವರನ್ನು  ಚುಡಾಯಿಸಿದ ಎನ್ನಲಾಗಿದೆ. ಪಕ್ಕದಲ್ಲಿ ಕುಳಿತವರು  ಮಹಿಳಾ ಪೊಲೀಸ್ ಎನ್ನುವುದು ಗೊತ್ತಿರಲಿಲ್ಲ. ಅವರು ಸಿವಿಲ್ ಡ್ರೆಸ್ ನಲ್ಲಿ ಚಿತ್ರ ವೀಕ್ಷಿಸಲು ಆಗಮಿಸಿದ್ದರು. ಮಹಿಳೆಯರ ಪಕ್ಕದ ಸೀಟಿನಲ್ಲಿಯೇ ಈ ಯುವಕ ಕುಳಿತಿದ್ದು, ಅಸಭ್ಯವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ. ಪೊಲೀಸರ ಬುದ್ಧಿ ಮಾತಿಗೂ ಬೆಲೆ ಕೊಡಲಿಲ್ಲ. ಅವನನ್ನು ಹಿಡಿದ ಮಹಿಳಾ ಪೊಲೀಸ್ ಭಾರತಿ ಹಣ್ಣುಗಾಯಿ, ನೀರುಗಾಯಿ ಮಾಡಿದ್ದಾರೆ. ಎಸ್.ಪಿ.ಜಿ ಚಿತ್ರಮಂದಿರಕ್ಕೆ ಚಕ್ರವರ್ತಿ ಚಿತ್ರ ವೀಕ್ಷಿಸಲು ಆಗಮಿಸಿದ್ದಾಗ ಈ ಘಟನೆ ನಡೆದಿದೆ. ಯುವಕನನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದೀಗ ಪಾನಮತ್ತ ಯುವಕ ಪೊಲೀಸರ ಅತಿಥಿಯಾಗಿದ್ದಾನೆ.  (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: