ಕರ್ನಾಟಕಪ್ರಮುಖ ಸುದ್ದಿ

ಗೋಕರ್ಣ ಕಡಲತೀರದಲ್ಲಿ ಈಜಲು ಹೋಗಿ ಓರ್ವ ಸಾವು; ನಾಲ್ವರ ರಕ್ಷಣೆ

ಕಾರವಾರ,ಜ.5-ಗೋಕರ್ಣ ಕಡಲತೀರದಲ್ಲಿ ಈಜಲು ಸಮುದ್ರಕ್ಕೆ ಇಳಿದಿದ್ದ ಐವರು ಪ್ರವಾಸಿಗರ ಪೈಕಿ ಓರ್ವ ಮೃತಪಟ್ಟಿದ್ದು, ನಾಲ್ವರನ್ನು ರಕ್ಷಿಸಲಾಗಿದೆ.

ತುಮಕೂರು ಮೂಲದ ರಂಗನಾಥ ರಂಗಸಾಮಯ್ಯ (19) ಮೃತ ಯುವಕ. ತುಮಕೂರಿನಿಂದ 10 ಮಂದಿ ಪ್ರವಾಸಕ್ಕೆ ಬಂದಿದ್ದರು. ದೇವರ ದರ್ಶನ ಪಡೆದ ಬಳಿಕ ಗೋಕರ್ಣ ಮುಖ್ಯ ಕಡಲತೀರದಲ್ಲಿ ಈಜಾಡಲು ತೆರಳಿದಾಗ ಒಮ್ಮೆಲೆ ಬಂದ ಅಲೆಗೆ ಐವರು ಯುವಕರು ಕೊಚ್ಚಿಕೊಂಡು ಹೋಗಿದ್ದಾರೆ.

ತಕ್ಷಣ ಜೊತೆಯಲ್ಲಿದ್ದವರು ಕೂಗಿಕೊಂಡಾಗ ಸಮೀಪದಲ್ಲೇ ಇದ್ದ ಬೋಟಿಂಗ್ ಕರೆದುಕೊಂಡು ಹೋಗುವ ಶೇಖರ ಹರಿಕಾಂತ, ನಿತ್ಯಾನಂದ ಹರಿಕಾಂತ ಅವರು ನಾಲ್ವರನ್ನು ರಕ್ಷಿಸಿದ್ದಾರೆ.

ದಡಕ್ಕೆ ತರುವ ವೇಳೆಯಲ್ಲಿ ಓರ್ವ ಮಾತ್ರ ಅಲೆಗಳಿಗೆ ಸಿಕ್ಕಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ. ತಕ್ಷಣ ಆತನನ್ನು ಆಯಂಬುಲೆನ್ಸ್ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಗಿತ್ತಾದರೂ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಎಂ.ಎನ್)

Leave a Reply

comments

Related Articles

error: