ಮೈಸೂರು

ಅರಣ್ಯ ಇಲಾಖೆ ಅಧಿಕಾರಿಗಳ ಕಿರುಕುಳದಿಂದ ಬೇಸತ್ತ ಕುಟುಂಬ : ಆತ್ಮಹತ್ಯಗೆ ಅವಕಾಶ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಜ.5:- ಅರಣ್ಯ ಇಲಾಖೆ ಮೈಸೂರು ವಲಯದ ಅಧಿಕಾರಿಗಳು ನೀಡುತ್ತಿರುವ ಕಿರುಕುಳದಿಂದ ಬೇಸತ್ತ ಕುಟುಂಬವೊಂದು ಆತ್ಮಹತ್ಯೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ಇಂದು ಅರಣ್ಯಭವನದ ಅರಣ್ಯಭವನದ ಎದುರು ಪ್ರತಿಭಟನೆ ನಡೆಸಿವೆ.
ಹೆಚ್ ಡಿ ಕೋಟೆ ತಾಲೂಕಿನ ಬೆಟ್ಟದ ಬೀಡು ಗ್ರಾಮದ ಕುಮಾರಿ ಎಂಬವರೇ ತಮ್ಮ ಮಕ್ಕಳೊಂದಿಗೆ ಆಗಮಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ನನ್ನ ಪತಿ ಬೋರೇಗೌಡ ದಿನಗೂಲಿ ವಾಚರ್ ಆಗಿ ಕಳೆದ 2001-2002 ರಿಂದ ಇಲ್ಲಿಯವರೆಗೂ ಕೆಲಸ ನಿರ್ವಹಿಸುತ್ತಾ ಬಂದಿದ್ದಾರೆ. ಮೈಸೂರು ವಲಯದ ವಿವಿಧ ಸ್ಥಳಗಳಲ್ಲಿ ನೆಡುತೋಪು ಕಾವಲುಗಾರನಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.ಆದರೆ ನಮ್ಮ ಯಜಮಾನರಿಗೆ ಕಳೆದ ಫೆಬ್ರವರಿ2020ರಿಂದ ಅಕ್ಟೋಬರ್ 2020ರ ಅವಧಿಗೆ 9 ತಿಂಗಳ ಸಂಬಳ ನೀಡಿಲ್ಲ. ಜೂನ್ 2020ರಲ್ಲಿ ಅವರು ಆರೋಗ್ಯ ಸಮಸ್ಯೆಯಿಂದ ತೊಂದರೆಗೆ ಒಳಗಾಗಿದ್ದು ಈ ಸಮಯದಲ್ಲಿ 15ದಿನ ಕೆಲಸಕ್ಕೆ ಹೋಗಿಲ್ಲ. ಾಸ್ಪತ್ರೆಯ ಖರ್ಚಿಗಾಗಿ ಹಣವಿಲ್ಲವೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಫೆ.20ರಿಂದ ಬರಬೇಕಾದ ಸಂಬಳ ಕೇಲಿದ ಕಾರಣ ನನ್ನ ಯಜಮಾನರನ್ನು ಕೆಲಸಕ್ಕೆ ಬರುವುದು ಬೇಡವೆಂದು ಹೇಳಿದ್ದಾರೆ. ಆಗ ನಾನು ಮೈಸೂರಿನ ಅರಣ್ಯ ಭವನ ವೃತ್ತ ಕಛೇರಿಗೆ ಹೋಗಿ ಸಂಬಂಧಪಟ್ಟವರಿಗೆ ನನ್ನ ಕಷ್ಟ ಹೇಳಿಕೊಂಡಾಗ ವಲಯ ಅಧಿಕಾರಿಗಳಿಗೆ ಸೂಚನೆ ನೀಡಿ 14ಸಾವಿರ ರೂ.ಗಳನ್ನು ಕರ್ನಾಟಕ ಬ್ಯಾಂಕ್ ಮುಖಾಂತರ ನನ್ನ ಖಾತೆಗೆ ಹಾಕಿದ್ದು ಈ ಹಣ ಜನವರಿ 2020, ಫೆಬ್ರವರಿ 2020ಕ್ಕೆ ಸಂಬಂಧಿಸಿದ ಸಂಬಳವಾಗಿರುತ್ತದೆ. ಆದರೆ ಮಾರ್ಚ್ 2020ರಿಂದ ಅಕ್ಟೋಬರ್ 2020ರ ಸಂಬಳವನ್ನು ಕೊಟ್ಟಿಲ್ಲ. ನವೆಂಬರ್ 2020ರಿಂದ ಕೆಲಸಕ್ಕೆ ಬರುವುದು ಬೇಡವೆಂದು ತಿಳಿಸಿದ್ದಾರೆ. ನಮ್ಮ ಯಜಮಾನರು ಕಳೆದ 18-19ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ 43ವರ್ಷ. ಹಾಗಾಗಿ ಬೇರೆ ಕಡೆ ಕೆಲಸಕ್ಕೆ ಹೋಗಲು ಸಾಧ್ಯವಿಲ್ಲ. ಕೆಲಸ ಹೋದರೆ ನಮ್ಮ ಸಂಸಾರ ಬೀದಿಗೆ ಬೀಳುತ್ತದೆ. ನನಗೂ ಆರೋಗ್ಯದ ಸಮಸ್ಯೆ ಇದ್ದು ಮಕ್ಕಳನ್ನು ಕೂಲಿ ಮಾಡಿ ಸಾಕಲು ಸಾಧ್ಯವಿಲ್ಲ. ಈಗ ನನಗಿರುವ ಒಂದೇ ಮಾರ್ಗ ನನ್ನ ಯಜಮಾನರಿಗೆ ಕೆಲಸ ಕೊಡಿಸಬೇಕು. ಇಲ್ಲವಾದರೆ ನನ್ನ ಕುಟುಂಬದ ಎಲ್ಲಾ ಸದಸ್ಯರು ಸಾಮೂಹಿಕವಾಗಿ ಜೀವ ಬಿಡಬೇಕು. ಆಗ ಮಾತ್ರ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇದುವರೆಗೂ ಯಾವುದೇ ಸಂಬಂಧಿಸಿದ ಅಧಿಕಾರಿಗಳೂ ಕ್ರಮ ತೆಗೆದುಕೊಂಡಿಲ್ಲ.
ಒಂದು ವೇಳೆ ನಮಗೆ ನ್ಯಾಯ ಸಿಗದೇ ಹೋದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ವೃತ್ತ ಕಛೇರಿ ಅರಣ್ಯಭವನ ಅಶೋಕಪುರಂ ಮೈಸೂರು ಇಲ್ಲಿ ನಾನು ಮತ್ತು ನನ್ನ ಕುಟುಂಬದವರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ನಮ್ಮ ಸಾವಿಗೆ ಕಾರಣ ಇಲಾಖೆಯ ನೌಕರರಾದ ವಲಯ ಅಧಿಕಾರಿ ಹಾಗೂ ಅರಣ್ಯ ವನಪಾಲಕರಾದ ವಿನೋದ್ ಕುಮಾರ್, ಮಾಲಯ್ಯ, ರಕ್ಷಕರಾದ ರಾಜೇಗೌಡ, ಅರ್ಜುನ ಇವರುಗಳೆಲ್ಲರೂ ನೇರವಾಗಿ ಕಾರಣರಾಗಿದ್ದು ಇವರಿಗೆ ಶಿಕ್ಷೆ ಆಗಬೇಕು. ಈ ಅಧಿಕಾರಿಗಳು 2018-19ರಲ್ಲಿ 6ತಿಂಗಳು ಸಂಬಳ ನೀಡಿಲ್ಲ. ಸರ್ಕಾರ ಕೊಡುವ ಸಂಬಳಕ್ಕೆ ದಾಖಲೆ ಇಲ್ಲದೆ ನಮ್ಮ ಮನೆಯವರಿಗೆ ಅಲ್ಲದೆ ಕೆಲಸ ನಿರ್ವಹಿಸುವ ಎಲ್ಲರಿಗೂ ಹೀಗೆ ಕಿರುಕುಳ ನೀಡುತ್ತಿದ್ದಾರೆ. ಅವರಿಗೆ ಹೇಳಲು ಸಾಧ್ಯವಿಲ್ಲ. ಈಗ ನಾವು ಸಾವಿಗೆ ಹೆದರುತ್ತಿಲ್ಲ. ಆದರೆ ಕಿರುಕುಳ ನೀಡುತ್ತಿದ್ದಾರೆ. ಕಿರುಕುಳ ನಿಲ್ಲಬೇಕು. ಬೇರೆಯವರಿಗಾದರೂ ಒಳ್ಳೆಯದಾಗಲಿ ಈ ಕುರಿತು ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: