ಮೈಸೂರು

ನ್ಯಾಯಾಲಯದಲ್ಲಿ ಕೋವಿಡ್ ಗೂ ಮೊದಲು ಕಾರ್ಯನಿರ್ವಹಿಸುವಂತೆ ಈಗಲೂ ಮುಂದುವರಿಸಿಕೊಂಡು ಹೋಗುವಂತೆ ಒತ್ತಾಯ

ಮೈಸೂರು,ಜ.6:- ಕೋವಿಡ್ -19 ಬರುವ ಮೊದಲು ನ್ಯಾಯಾಲಯದಲ್ಲಿ ಕೆಲಸ ಕಾರ್ಯಗಳು ಹೇಗೆ ನಡೆಯುತ್ತಿತ್ತೋ ಅದೇ ರೀತಿ ಮುಂದುವರಿಸಿಕೊಂಡು ಹೋಗುವಂತೆ ಒತ್ತಾಯಿಸಿ ಕರ್ನಾಟಕ ಜನಪರ ಶಕ್ತಿ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು.
ಇಂದು ಜಿಲ್ಲಾಧಿಕಾರಿಗಳ ಕಛೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ನ್ಯಾಯಾಲಯಕ್ಕೆ ಬರುವ ಜನತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುತ್ತಾರೆ. ಕೋರ್ಟಿನ ಆವರಣದಲ್ಲಿ ಜನತೆ ಸಾಮಾಜಿಕ ಅಂ ತರವನ್ನು ಕಾಯ್ದುಕೊಳ್ಳದೆ ಅಕ್ಕಪಕ್ಕದಲ್ಲಿಯೇ ಜನಜಂಗುಳಿಯಿಂದ ತುಂಬಿರುತ್ತಾರೆ. ಇಲ್ಲಿಗೆ ಬರುವವರಿಗೆ ತುಂಬಾ ತೊಂದರೆಯಾಗುತ್ತಿರುತ್ತದೆ. ನ್ಯಾಯಾಲಯಕ್ಕೆ ಪ್ರತಿದಿನವು ಅಧಿಕ ಸಂಖ್ಯೆಯಲ್ಲಿ ಜನರು ಬರುತ್ತಿರುತ್ತಾರೆ. ಅವರಲ್ಲಿ ವಯಸ್ಸಾದವರು, ಅಂಗವಿಕಲರು, ಸಣ್ಣಪುಟ್ಟಮಕ್ಕಳು ಸಹ ಇರುತ್ತಾರೆ. ಅವರಿಗೆಲ್ಲಾ ಕೋರ್ಟಿನ ಒಳಗೆ ಸಲೀಸಾಗಿ ಪ್ರವೇಶವಿಲ್ಲದೆ ಹೊರಗಡೆ ಬಿಸಿಲಿನಲ್ಲಿ ನಿಂತಿರುತ್ತಾರೆ. ಅವರಿಗೆ ಊಟ, ತಿಂಡಿಯ ವ್ಯವಸ್ಥೆ ಸಹ ಇರುವುದಿಲ್ಲ. ಕೋವಿಡ್-19 ಇರುವುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದ್ದು ಸರ್ಕಾರವು ಎಲ್ಲಾ ವ್ಯವಸ್ಥೆಯನ್ನು ತೆರವುಗೊಳಿಸಿದೆ. ಆದರೆ ನ್ಯಾಯಾಲಯ ಮಾತ್ರ ತೆರೆದಿಲ್ಲ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಆದಷ್ಟು ಬೇಗ ನ್ಯಾಯಾಲಯವನ್ನು ಸಾರ್ವಜನಿಕರಿಗೆ ಉಪಯೋಗವಾಗುವಂತೆ ಅನುಕೂಲ ಮಾಡಿಕೊಡುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಅಧ್ಯಕ್ಷ ಆರ್.ಮಧು ಸೇರಿದಂತೆ ಕೆಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: