ಕರ್ನಾಟಕಪ್ರಮುಖ ಸುದ್ದಿ

ಬಿತ್ತನೆ ಮಾಡಿ, ಹಾಲು ಕರೆದು ಗಮನ ಸೆಳೆದ ಕೃಷಿ ಸಚಿವ ಬಿ.ಸಿ.ಪಾಟೀಲ್

ಕೋಲಾರ,ಜ.6-ಹೊಲದಲ್ಲಿ ಕೊತ್ತಂಬರಿ ಬೀಜ ಬಿತ್ತನೆ ಮಾಡಿ, ಹಸುವಿನ ಹಾಲನ್ನು ಕರೆದ ಕೃಷಿ ಸಚಿವ ಬಿ.ಸಿ.ಪಾಟೀಲ್ ಎಲ್ಲರ ಗಮನ ಸೆಳೆದರು.

ಕೋಲಾರ ಜಿಲ್ಲೆಯಲ್ಲಿಂದು ಆಯೋಜಿಸಿದ್ದ ‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮವನ್ನು ರಾಗಿಕಣಕ್ಕೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿದ ಬಿ.ಸಿ.ಪಾಟೀಲ್ ಅವರು, ಬೇವಿನಹಳ್ಳಿ ಗ್ರಾಮದ ಪ್ರಗತಿಪರ ಕೃಷಿಕ ಮಹಿಳೆ ಅಶ್ವತ್ಥಮ‌ ಅವರ ಜಮೀನಿಗೆ ಭೇಟಿ ನೀಡಿ ಹೊಲದಲ್ಲಿ ಕೊತ್ತಂಬರಿ ಬೀಜ ಬಿತ್ತನೆ ಮಾಡಿದರು. ಅಲ್ಲದೆ ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿದ ಕೃಷಿಕ ದಂಪತಿಗಳಿಗೆ ಸನ್ಮಾನ ಮಾಡಿದರು.

ಜೊತೆಗೆ ಹೊಲದಲ್ಲಿ ಚಾಪ್ ಕಟರ್‌ನಿಂದ ಹುಲ್ಲನ್ನು ಕತ್ತರಿಸಿ, ಹಸುವಿನ ಹಾಲನ್ನು ಕರೆದು ರೈತ ಜೀವನದ ಅನುಭವವನ್ನು ಪಡೆದರಲ್ಲದೆ, ರೈತರಲ್ಲಿ ಉತ್ಸಾಹ ತುಂಬಿದರು.

ರೈತರಿಗೆ ಮನೋಸ್ಥೈರ್ಯ ತುಂಬಲು ಹಾಗೂ ಅವರಲ್ಲಿ ಕೃಷಿಯ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮವನ್ನು ಬಿ.ಸಿ ಪಾಟೀಲ್ ಹಮ್ಮಿಕೊಂಡಿದ್ದಾರೆ. ನವೆಂಬರ್ 14 ರಂದು ಮಂಡ್ಯ ಜಿಲ್ಲೆಯಿಂದ ರೈತರೊಂದಿಗೆ ಒಂದು ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದ ಸಚಿವರು ಇದೀಗ ಕೋಲಾರದಲ್ಲಿ ರೈತರೊಂದಿಗೆ ಕಾಲ ಕಳೆದರು.

ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್ ಹಾಗೂ ಮತ್ತಿತರ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು. (ಎಂ.ಎನ್)

Leave a Reply

comments

Related Articles

error: