ಮೈಸೂರು

ಎನ್ ಎಸ್ ಎಸ್ ಅತ್ಯುತ್ತಮ – ಉತ್ತಮ ಪ್ರಶಸ್ತಿಗೆ ಆಯ್ಕೆಯಾದ ಎಂಎಂಕೆ-ಎಸ್ ಡಿಎಂ ವಿದ್ಯಾರ್ಥಿನಿಯರಾದ ನಿವೇದಿತಾ, ಶ್ರೀಲಲಿತ

ಮೈಸೂರು,ಜ.6:- ಮೈಸೂರಿನ ಎಂ.ಎಂ.ಕೆ.ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಮಹಾ ವಿದ್ಯಾಲಯ ಎನ್.ಎಸ್.ಎಸ್.ಘಟಕದ ಅಂತಿಮ ಬಿಕಾಂ ವಿದ್ಯಾರ್ಥಿನಿ ಸ್ವಯಂಸೇವಕಿ ನಿವೇದಿತಾ ಪಿ.ಇವರಿಗೆ 2019-2020ನೇ ಶೈಕ್ಷಣಿಕ ಸಾಲಿನ ಮೈಸೂರು ವಿಶ್ವವಿದ್ಯಾನಿಲಯ ಮಟ್ಟದ ಅತ್ಯುತ್ತಮ ಎನ್.ಎಸ್.ಎಸ್ ಸ್ವಯಂಸೇವಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ನಿವೇದಿತಾ ಅವರು ಕಾಲೇಜು ಶಿಬಿರ,ರಾಷ್ಟ್ರೀಯ ಭಾವೈಕ್ಯತಾ ಶಿಬಿರ ,ದಕ್ಷಿಣ ವಲಯ ಅಂತರರಾಜ್ಯ ಪಥಸಂಚಲನ ಶಿಬಿರ ಮತ್ತು 2020ಜನವರಿಯಲ್ಲಿ ದೆಹಲಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಮತ್ತು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿರುತ್ತಾರೆ.
ಶ್ರೀಲಲಿತ ಅಂತಿಮ ಬಿ.ಎಸ್ಸಿ ವಿದ್ಯಾರ್ಥಿನಿ ಸ್ವಯಂ ಸೇವಕಿ ಇವರಿಗೆ 2019-2020ನೇ ಸಾಲಿನ
ಮೈಸೂರು ವಿಶ್ವವಿದ್ಯಾನಿಲಯ ಮಟ್ಟದ ಪ್ರೊ.ಉ.ಕಾ.ಸುಬ್ಬರಾಯಚಾರ್ ಸ್ಮರಣೀಯ ಉತ್ತಮ
ಎನ್.ಎಸ್.ಎಸ್ ಸ್ವಯಂ ಸೇವಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕಾಲೇಜಿಗೆ ಸತತ ಮೂರು ವರ್ಷಗಳಿಂದಲೂ ಈ ಪ್ರಶಸ್ತಿ ಬಂದಿದ್ದು, ಹ್ಯಾಟ್ರಿಕ್ ಲಭಿಸಿದೆ.
ಶ್ರೀಲಲಿತ ಅವರು ಕಾಲೇಜಿನ ಪ್ರತಿಭಾನ್ವಿತ ಸಾಂಸ್ಕೃತಿಕ,ಸಾಹಿತ್ಯಕ ಹಲವು ಬಹುಮಾನ ಪಡೆದಿರುತ್ತಾರೆ ಮತ್ತು ಕಾಲೇಜು ಶಿಬಿರ, ರಾಜ್ಯಮಟ್ಟದ ಯುವಜನೋತ್ಸವ ಶಿಬಿರ ಮತ್ತು ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಮೈಸೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿರುತ್ತಾರೆ. ಪ್ರಶಸ್ತಿ ಪುರಸ್ಕೃತರಾದ ಇವರನ್ನು ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರಾದ ಪ್ರೊ.ಸಾಯಿನಾಥ ಮಲ್ಲಿಗೆಮಾಡು, ಎನ್ ಎಸ್ ಎಸ್ ಅಧಿಕಾರಿ ಮಾರುತಿ ಪ್ರಸನ್ನ, ಅಧ್ಯಾಪಕ/ಅಧ್ಯಾಪಕೇತರವೃಂದ ಮತ್ತು ಕಾಲೇಜು ರಾ.ಸೇ.ಯೋ.ಸಲಹಾ ಮಂಡಳಿಯವರು ಅಭಿನಂದಿಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: