ಕರ್ನಾಟಕಪ್ರಮುಖ ಸುದ್ದಿ

ಜ.8 ರಂದು ಕೊರೋನಾ ಲಸಿಕೆ ಡ್ರೈ ರನ್ ಗೆ ರಾಜ್ಯದಲ್ಲೂ ತಯಾರಿ

ರಾಜ್ಯ( ಬೆಂಗಳೂರು)ಜ.7:- ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ತಲಾ ಏಳು ಆರೋಗ್ಯ ಕೇಂದ್ರಗಳಲ್ಲಿ ಜ.8 ರಂದು ಕೊರೋನಾ ಲಸಿಕೆ ಡ್ರೈ ರನ್ (ಅಣಕು) ನಡೆಸಲು ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಕೇಂದ್ರ ಸರ್ಕಾರವು ಜ.13 ರಂದು ಮೊದಲನೇ ಹಂತದ ಲಸಿಕೆ ವಿತರಣೆಗೆ ಘೋಷಿಸಿದ ಬೆನ್ನಲ್ಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಲಸಿಕೆ ವಿತರಣೆ ತಾಲೀಮು ನಡೆಸಲು ರಾಜ್ಯ ಆರೋಗ್ಯ ಇಲಾಖೆ ನಿರ್ಧರಿಸಿದೆ.
ಈ ಬಾರಿ ಖಾಸಗಿ ಆರೋಗ್ಯ ಕೇಂದ್ರಗಳಿಗೂ ಅವಕಾಶ ನೀಡುವ ಸಾಧ್ಯತೆಗಳಿವೆ. ಈ ಹಿಂದಿನಂತೆ ಪ್ರತಿ ಆರೋಗ್ಯ ಕೇಂದ್ರಕ್ಕೆ 25 ಆರೋಗ್ಯ ಕಾರ್ಯಕರ್ತರನ್ನು ಫಲಾನುಭವಿಗಳಾಗಿ ನಿಯೋಜಿಸಲಾಗಿದೆ. ಖಾಸಗಿ ಆರೋಗ್ಯ ಕೇಂದ್ರಕ್ಕೆ 100 ಫಲಾನುಭವಿಗಳಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ.

ಮೊದಲ ಹಂತದ ಡ್ರೈ ರನ್ ಮಾದರಿಯಲ್ಲಿಯೇ ಇದು ಕೂಡಾ ನಡೆಯಲಿದೆ. ಒಟ್ಟಾರೆ ಎರಡನೇ ಹಂತದ ಡ್ರೈ ರನ್‌ನಲ್ಲಿ 200ಕ್ಕೂ ಆರೋಗ್ಯ ಕೇಂದ್ರಗಳು, 5000ಕ್ಕೂ ಹೆಚ್ಚು ಪ್ರಾತ್ಯಕ್ಷಿಕೆ ಫಲಾನುಭವಿಗಳು ಭಾಗವಹಿಸುವ ಸಾಧ್ಯತೆಗಳಿವೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: