ಮೈಸೂರು

ಬಾಲಾಪರಾಧಿಗಳು ಪದ ಬಳಕೆ ಬೇಡ

ಮೈಸೂರು, ಜ,7:- ಮಕ್ಕಳ ರಕ್ಷಣಾ ನಿರ್ದೇಶನಾಲಯವು ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ, 2015 ಅನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮೂಲಕ ಅನುಷ್ಠಾನಗೊಳಿಸುತ್ತಿದೆ. ಕಾನೂನಿನ ಸಂಘರ್ಷಕ್ಕೆ ಒಳಪಟ್ಟ ಮಕ್ಕಳ ಬಗ್ಗೆ ಬರೆಯುವಾಗ ‘ಬಾಲಾಪರಾಧಿಗಳು’ ಎಂದು ಬಳಸುವುದು ತಪ್ಪು. ಇಂತಹ ಸಂದರ್ಭದಲ್ಲಿ ‘ಕಾನೂನಿನ ಸಂಘರ್ಷಕ್ಕೆ ಒಳಪಟ್ಟ ಮಕ್ಕಳು’ ಎಂದೇ ಬಳಸಬೇಕಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಡಾ.ಎಸ್. ದಿವಾಕರ್ ತಿಳಿಸಿದ್ದಾರೆ.
ಅದಲ್ಲದೆ ಸುಧಾರಣಾ ಸಂಸ್ಥೆಗಳು/ಕರೆಕ್ಷನಲ್ ಹೋಮ್ಸ್ ಎಂದು ವರದಿ ಮಾಡುವ ಬದಲು “ಮಕ್ಕಳ ಪಾಲನಾ ಸಂಸ್ಥೆಗಳು” ಎಂದೂ ಮಾತ್ರ ವರದಿ ಮಾಡುವಂತೆ ಎಲ್ಲಾ ಮಾಧ್ಯಮಗಳ ಪ್ರತಿನಿಧಿಗಳು ಸೇರಿದಂತೆ ಎಲ್ಲರೂ ತಿಳಿದುಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

comments

Related Articles

error: