ಕ್ರೀಡೆದೇಶಪ್ರಮುಖ ಸುದ್ದಿ

ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ : ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

ದೇಶ(ಕೋಲ್ಕತಾ)ಜ.7:- ಬಿಸಿಸಿಐ ಅಧ್ಯಕ್ಷ ಮತ್ತು ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಆಸ್ಪತ್ರೆಯಿಂದ ಹೊರಬಂದ ನಂತರ ಸೌರವ್ ಗಂಗೂಲಿ ಈಗ ಮೊದಲಿಗಿಂತ ಉತ್ತಮವಾಗಿದ್ದೇನೆಂದು ಹೇಳಿದರು. 48 ವರ್ಷದ ಗಂಗೂಲಿ ಶನಿವಾರ ಲಘು ಹೃದಯಾಘಾತದಿಂದ ಕೊಲ್ಕತ್ತಾದ ವುಡ್ಲ್ಯಾಂಡ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದರು.
ವುಡ್ಲ್ಯಾಂಡ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಸೌರವ್ ಗಂಗೂಲಿ ಆಸ್ಪತ್ರೆಯ ಸಿಬ್ಬಂದಿ ಮತ್ತು ವೈದ್ಯರಿಗೆ ಧನ್ಯವಾದ ಅರ್ಪಿಸಿದರು. “ಈಗ ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ. ಚಿಕಿತ್ಸೆಗಾಗಿ ಆಸ್ಪತ್ರೆಯ ವೈದ್ಯರಿಗೆ ಧನ್ಯವಾದ ಅರ್ಪಿಸುತ್ತೇನೆ. ಈಗ ನಾನು ಉತ್ತಮವಾಗಿದ್ದೇನೆ ಎಂದಿದ್ದಾರೆ. ಗಂಗೂಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಮನೆಯಲ್ಲಿ ವಿಶ್ರಾಂತಿ ಪಡೆಯಬೇಕಾಗುತ್ತದೆ. ಈ ಸಮಯದಲ್ಲಿ, ಗಂಗೂಲಿಯವರ ಆರೋಗ್ಯವನ್ನು ಮನೆಯಲ್ಲಿಯೇ ನೋಡಿಕೊಳ್ಳಲಾಗುತ್ತದೆ.
ವುಡ್ಲ್ಯಾಂಡ್ಸ್ ಆಸ್ಪತ್ರೆಯ ಎಂಡಿ ಮತ್ತು ಸಿಇಒ ರೂಪಾಲಿ ಬಸು ಮಾತನಾಡಿ, ಗಂಗೂಲಿಯವರ ಸ್ಥಿತಿ ಸುಧಾರಿಸುತ್ತಿದೆ, ಆದ್ದರಿಂದ ಅವರಿಗೆ ಮಾಡಬೇಕಾಗಿರುವ ಆಂಜಿಯೋಪ್ಲ್ಯಾಸ್ಟಿಯನ್ನು ಕೆಲವು ದಿನಗಳವರೆಗೆ ಮುಂದೂಡುವ ಸಾಧ್ಯತೆ ಇದೆ. ಪ್ರಸ್ತುತ, ಹಿರಿಯ ವೈದ್ಯರ ಒಂಭತ್ತು ಸದಸ್ಯರ ಮಂಡಳಿಯು ಸೋಮವಾರ ಗಂಗೂಲಿಯ ಆರೋಗ್ಯದ ಬಗ್ಗೆ ಚರ್ಚಿಸಿ ಅವರಿಗೆ ಮನೆಗೆ ಹೋಗಲು ಒಪ್ಪಿಗೆ ನೀಡಿತ್ತು ಎಂದಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: