ಮೈಸೂರು

ಡಾ. ಗುರುರಾಜ ಕರ್ಜಗಿಯವರಿಂದ ಜ್ಞಾನ ವಾರಿಧಿ-6 ಡಿಜಿಟಲ್ ಸಾಪ್ತಾಹಿಕ ಉಪನ್ಯಾಸ ಕಾರ್ಯಕ್ರಮ

ಮೈಸೂರು,ಜ.7:- ಜೆಎಸ್‍ಎಸ್ ಮಹಾವಿದ್ಯಾಪೀಠ ಮತ್ತು ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯ ಆಶ್ರಯದಲ್ಲಿ ಆನ್‍ಲೈನ್ (ವರ್ಚುವಲ್) ಮೂಲಕ ವಿಶೇಷ ಉಪನ್ಯಾಸ ಮಾಲೆಯ ಕಾರ್ಯಕ್ರಮಗಳನ್ನು 2020ರ ಡಿಸೆಂಬರ್ ತಿಂಗಳಿನಿಂದ ಪ್ರತಿ ಸೋಮವಾರ ಹಮ್ಮಿಕೊಳ್ಳಲಾಗಿದೆ.
ಕಲೆ, ಸಾಹಿತ್ಯ, ಸಂಸ್ಕೃತಿ, ವಿಜ್ಞಾನ, ತಂತ್ರಜ್ಞಾನ, ಧರ್ಮ, ಅಧ್ಯಾತ್ಮ ಮುಂತಾದ ವಿಷಯಗಳು ಮತ್ತು ಪ್ರಚಲಿತ ವಿದ್ಯಮಾನಗಳನ್ನು ಕುರಿತು ದೇಶ ಮತ್ತು ವಿದೇಶದ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸಗಳನ್ನು ಆಯೋಜಿಸಲಾಗಿದೆ.
ಜ್ಞಾನ ವಾರಿಧಿ-6 ಡಿಜಿಟಲ್ ಸಾಪ್ತಾಹಿಕ ಉಪನ್ಯಾಸ ಕಾರ್ಯಕ್ರಮವು 11.1.2021ರ ಸೋಮವಾರ ಸಂಜೆ 6 ಗಂಟೆಗೆ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ಜರುಗಲಿದೆ. ಖ್ಯಾತ ಶಿಕ್ಷಣತಜ್ಞರು ಹಾಗೂ ಅಂಕಣ ಬರಹಗಾರರಾದ ಡಾ. ಗುರುರಾಜ ಕರ್ಜಗಿಯವರು ಮಹಾಭಾರತದ ಸೂಕ್ಷ್ಮ ಅವಲೋಕನ ಕುರಿತು ಆನ್‍ಲೈನ್‍ನಲ್ಲಿ ಉಪನ್ಯಾಸ ನೀಡಲಿದ್ದಾರೆ.
ಈ ಉಪನ್ಯಾಸವನ್ನು Yotube http://Youtube.com/c/JSSMahavidyapeethaonline
https://www.facebook.com/JSSMVP, http://jssonline.org ಲಿಂಕ್‍ಗಳ ಮೂಲಕ ಕೇಳಬಹುದಾಗಿದೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: