ಕರ್ನಾಟಕಪ್ರಮುಖ ಸುದ್ದಿ

ಮಹಾರಾಷ್ಟ್ರದಲ್ಲಿ ಈಜಲು ಹೋದ ಬೆಳಗಾವಿಯ 11 ವಿದ್ಯಾರ್ಥಿಗಳು ನೀರುಪಾಲು

ಬೆಳಗಾವಿಯ ಮರಾಠ ಮಂಡಳ ಇಂಜಿನಿಯರಿಂಗ್​​​​​​​​​ ಕಾಲೇಜು.

ಸಿಂದದುರ್ಗಾ: ಮಹಾರಾಷ್ಟ್ರದ ಸಿಂದದುರ್ಗದ ಮಾಲ್ವಾನ್ ವೈರಿಯಲ್ಲಿ ಸಮುದ್ರದಲ್ಲಿ ಮುಳುಗಿ ಬೆಳಗಾವಿ ಮೂಲದ 11 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಬೆಳಗಾವಿಯ ಮರಾಠ ಮಂಡಳ ಇಂಜಿನಿಯರಿಂಗ್​​​​​​​​​ ಕಾಲೇಜಿನ ಒಟ್ಟು 40 ಮಂದಿ ವಿದ್ಯಾರ್ಥಿಗಳು ಇಂದು ಪ್ರವಾಸಕ್ಕೆ ಆಗಮಿಸಿದ್ದರು.

ಮೀನುಗಾರರ ನೆರವಿನೊಂದಿಗೆ ಕಾರ್ಯಾಚರಣೆಗಿಳಿದ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರ ನೆರವಿನಿಂದ ಒಟ್ಟು 8 ವಿದ್ಯಾರ್ಥಿಗಳ ಶವವನ್ನು ಪತ್ತೆ ಮಾಡಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಮೂವರು ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

(ಎಸ್‍.ಎನ್‍/ಎನ್‍.ಬಿ.ಎನ್‍)

 

Leave a Reply

comments

Related Articles

error: