ಸುದ್ದಿ ಸಂಕ್ಷಿಪ್ತ

ಅ.2ರಂದು ಮೈಸೂರು ಜಿಲ್ಲಾ ಗಾಣಿಗರ ಸಂಘದ ಸಭೆ

ಮೈಸೂರು

ಮೈಸೂರು ಜಿಲ್ಲಾ ಗಾಣಿಗರ ಸಂಘದ ನಗರ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ  ಹಿನ್ನಲೆಯಲ್ಲಿ ಅ.2ರ ಭಾನುವಾರದಂದು, ಸರಸ್ವತಿ ಪುರಂನಲ್ಲಿರುವ ಸಂಘದ ವಿದ್ಯಾರ್ಥಿ ನಿಲಯದಲ್ಲಿ ಸಭೆ ಕರೆಯಲಾಗಿದ್ದು ಸರ್ವ ಸದಸ್ಯರು ಪಾಲ್ಗೊಳ್ಳಬೇಕೆಂದು ಬಿ.ಕ್ರಿಷ್ಣಶೆಟ್ಟಿ ತಿಳಿಸಿದರು.

ಅವರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ತಾಲೂಕು ಮಟ್ಟದಲ್ಲ 650 ಸದಸ್ಯರಿದ್ದು, ಮೈಸೂರು ನಗರದಲ್ಲಿಯೇ 317 ಜನ ಸದಸ್ಯರಿದ್ದಾರೆ. ಆಹ್ವಾನ ಪತ್ರಿಕೆ ತಲುಪದೆ ಇದ್ದವರು ಇದೇ ಆಹ್ವಾನವೆಂದು ಭಾವಿಸಿ ಸಭೆಗೆ ಹಾಜರಾಗಬೇಕು ಎಂದು ಕೋರಿದರು.  ಸುದ್ದಿಗೋಷ್ಠಿಯಲ್ಲಿ ಹಂಗಾಮಿ ಅಧ್ಯಕ್ಷ ಪಾಪಣ್ಣ, ಮಾಜಿ ಉಪಾಧ್ಯಕ್ಷ ಮಹದೇವಯ್ಯ, ಖಜಾಂಚಿ ಭೈರವ ಶೆಟ್ಟಿ ಹಾಗೂ ಬಿ.ಮಹದೇವ್ ಹಾಜರಿದ್ದರು.

Leave a Reply

comments

Related Articles

error: