ಕರ್ನಾಟಕಪ್ರಮುಖ ಸುದ್ದಿ

ನಟಿ ರಾಧಿಕಾ ಕುಮಾರಸ್ವಾಮಿ ಸಿಸಿಬಿ ವಿಚಾರಣೆ ಅಂತ್ಯ

ಬೆಂಗಳೂರು,ಜ.8- ಕೋಟ್ಯಾಂತರ ರೂಪಾಯಿ ವಂಚನೆ ಆರೋಪದಡಿ ಬಂಧಿತನಾಗಿರುವ ಯುವರಾಜ್​ ಅಲಿಯಾಸ್​ ಸ್ವಾಮಿ ಪ್ರಕರಣದಲ್ಲಿ ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ವಿಚಾರಣೆ ಎದುರಿಸಿ ಹೊರಬಂದಿದ್ದಾರೆ.

ಯುವರಾಜ್​ನಿಂದ ರಾಧಿಕಾಗೆ 1.25 ಕೋಟಿ ರೂಪಾಯಿ ಹಣ ವರ್ಗಾವಣೆ ಆಗಿರುವ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ವಿಚಾರಣೆಗೆ ಬರುವಂತೆ ಸಿಸಿಬಿ ಅಧಿಕಾರಿಗಳು ನಿನ್ನೆ ನೋಟಿಸ್ ನೀಡಿದ್ದರು.

ಅದರಂತೆ ಇಂದು ಬೆಳಿಗ್ಗೆ 11 ಗಂಟೆಗೆ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ತನ್ನ ಅಣ್ಣನ ಜತೆ ಆಗಮಿಸಿದ ರಾಧಿಕಾ ಅವರು ಸತತ ನಾಲ್ಕು ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದಾರೆ. ವಿಚಾರಣೆ ಮುಗಿಸಿ ಹೊರ ಬಂದಾಗ ಸುದ್ದಿಗಾರರೊಂದಿಗೆ ಮಾತನಾಡಿದ ರಾಧಿಕಾ ಅವರು, ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೀನಿ. ಮತ್ತೆ ವಿಚಾರಣೆಗೆ ಕರೆದರೆ ಬರುವೆ ಎಂದರು. ಸದ್ಯ ವಿಚಾರಣೆ ಮುಗಿಸಿರುವ ರಾಧಿಕಾ ಅವರು ಅಣ್ಣನೊಂದಿಗೆ ಮಡಿಕೇರಿಯತ್ತ ಹೊರಟಿದ್ದಾರೆ.

ಪ್ರಕರಣದಲ್ಲಿ ತಮ್ಮ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಮೊನ್ನೆ ಸುದ್ದಿಗೋಷ್ಠಿ ನಡೆಸಿದ್ದ ರಾಧಿಕಾ ಅವರು, ಯುವರಾಜ್ ಫ್ಯಾಮಿಲಿ ಫ್ರೆಂಡ್. ನಮಗೂ ಅವರಿಗೂ ಸಿನಿಮಾ ಹೊರತಾಗಿ ಯಾವುದೇ ಸಂಬಂಧವಿಲ್ಲ. ನಾಟ್ಯರಾಣಿ ಶಾಂತಲಾ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದೆ. ಈ ಕುರಿತು ಯಾವುದೇ ಒಪ್ಪಂದವಾಗಿರಲಿಲ್ಲ. ಆದರೂ 75 ಲಕ್ಷ ರೂ.ಗಳ ಮುಂಗಡ ಹಣವನ್ನು ನನ್ನ ಖಾತೆಗೆ ವರ್ಗಾವಣೆ ಮಾಡಿದ್ದರು. ಯುವರಾಜ್ ಅವರ ಖಾತೆಯಿಂದ 15 ಲಕ್ಷ ರೂ. ಹಾಗೂ ನಿರ್ಮಾಪಕರ ಖಾತೆಯಿಂದ 60 ಲಕ್ಷ ರೂ. ಹಣ ನನ್ನ ಖಾತೆಗೆ ವರ್ಗಾವಣೆಯಾಗಿತ್ತು. ನಾವು ಜ್ಯೋತಿಷಿ ಯುವರಾಜ್ ಒಳ್ಳೆಯ ವ್ಯಕ್ತಿ ಎಂದು ಭಾವಿಸಿದ್ದೆವು. ಇದೀಗ ಅವರ ಬಣ್ಣ ಬಯಲಾಗಿದೆ. ಹೀಗಾಗಿ ಜಮಾವಣೆಯಾದ ಹಣವನ್ನು ವಾಪಸ್ ಮಾಡಲಾಗುವುದು ಎಂದಿದ್ದರು. (ಎಂ.ಎನ್)

 

Leave a Reply

comments

Related Articles

error: