ಮೈಸೂರು

ನಕಲಿ ಔಷಧಿ ನೀಡಿ ವಂಚಿಸುತ್ತಿದ್ದ ಜಾಲ ಪತ್ತೆ, ನಾಲ್ವರು ಆರೋಪಿಗಳ ಬಂಧನ : ನಕಲಿ ಔಷಧಿಗಳ ವಶ

ಮೈಸೂರು,ಜ.8:- ಸಾರ್ವಜನಿಕ ರಸ್ತೆಯಲ್ಲಿ ಓಡಾಡುವ ಕಾಯಿಲೆಯುಳ್ಳ ಅಮಾಯಕ ಜನರನ್ನು ಗುರ್ತಿಸಿ, ವಿವಿಧ ಕಾಯಿಲೆಗಳಿಗೆ ನಾವು ಉತ್ತಮವಾದ ಆಯುರ್ವೇದ ಔಷಧಿಯನ್ನು ನೀಡುತ್ತೇವೆ ಎಂದು ನಂಬಿಸಿ ತಮ್ಮ ವಂಚನೆಯ ಜಾಲಕ್ಕೆ ಬೀಳಿಸಿಕೊಂಡು, ತಾತ್ಕಾಲಿಕವಾಗಿ ಪರಂಪರ ಆಯುರ್ವೇದಿಕ್, ಸಿದ್ಧಿವಿನಾಯಕ ಆಯುರ್ವೇದಿಕ್, ಸಾಯಿರಾಮ್ ಆಯುರ್ವೇದಿಕ್, ಧನ್ವಂತರಿ ಆಯುರ್ವೇದಿಕ್ ಎಂಬ ಹಲವಾರು ಹೆಸರುಗಳಲ್ಲಿ ನಕಲಿ ಔಷಧಿ ಅಂಗಡಿಗಳನ್ನು ತೆರೆದು ಈ ಅಂಗಡಿಗಳಿಗೆ ರೋಗಿಗಳನ್ನು ಬರಮಾಡಿಕೊಂಡು ಯಾವುದೋ ಪೌಡರ್‍ಗಳನ್ನು ಬಹು ಉತ್ಕೃಷ್ಟ ಮಟ್ಟದ ಆಯುರ್ವೇದ ಔಷಧಿಗಳೆಂದು ಅವರಿಗೆ ನಂಬಿಸಿ, ರಾಜ್ಯದ ವಿವಿಧ ಭಾಗದ ಸಾವಿರಾರು ಜನರಿಗೆ ವಂಚಿಸಿ, ಲಕ್ಷಾಂತರ ರೂಗಳನ್ನು ಪಡೆದು, ವಂಚಿಸುತ್ತಿದ್ದ ಮೂವರು ವಂಚಕರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಪ್ರಶಾಂತ್ ಅರ್ಜುನ್ ತಳವಾರ @ ಪರಶುರಾಮ್ ಅರ್ಜುನ್ ತಳವಾರ @ ಅರ್ಜುನ್ @ಪ್ರಶಾಂತ್ @ಪರಶುರಾಮ್ @ತಳವಾರ ಬಿನ್ ಅರ್ಜುನ್, (24), #ಅಬ್ದುಲ್ ಕಲಾಂ ಶಾಲೆ ಹತ್ತಿರ, ಅಂಬೇಡ್ಕರ್ ನಗರ, ಗೋಕಾಕ್, ಬೆಳಗಾಂ ಜಿಲ್ಲೆ, ಚಂದ್ರು ಮುನ್ನವ್ವ ಇರಗಾರ್ @ ಚಂದ್ರು ಬಿನ್ ಮುನ್ನವ್ವ(ದೇವದಾಸಿ), (25), #ಜನತಾ ಪ್ಲಾಟ್, ಓಂ ಶಾಂತಿ ರೋಡ್,
ಗೋಕಾಕ್, ಬೆಳಗಾಂ ಜಿಲ್ಲೆ, ಹರ್ಷದ್ ಮೊಹನ್ ಪವಾರ್ @ ಹೇಮಂತ್ ಮೋಹನ್ @ಹರ್ಷದ್ @ ಹೇಮಂತ್ @ ಮೋಹನ್ ಪರ್ಮಾರ ಬಿನ್ ಲೇ .ಮೋಹನ್,( 32) ವರ್ಷ, ಮರಾಠ ಜನಾಂಗ,ಸ್ವಂತ ವಿಳಾಸ: #ಎಲ್-15, ಜಹರೇರಾ ವಿಲ್ಹೇಜ್, ಸೌತ್ ದೆಹಲಿ, ನ್ಯೂದೆಹಲಿ, ಹಾಲಿ ವಿಳಾಸ: ಗುರು ಪಿ.ಜಿ. ಸುರೇಶ್ ಆಸ್ಪತ್ರೆ ಎದುರು, ಪಡುವಾರಹಳ್ಳಿ, ಮೈಸೂರು.
ಎಂಬವರುಗಳನ್ನು ಮೈಸೂರು ನಗರ ಸಿಸಿಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗಳು 01/01/2021
ರಂದು ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ವಶಕ್ಕೆ ತೆಗೆದುಕೊಂಡಿರುತ್ತಾರೆ. ನಂತರ ಮೈಸೂರು ವಿಮಾನ ನಿಲ್ದಾಣದಿಂದ ಬೆಳಗಾಂಗೆ ವಿಮಾನದ ಮೂಲಕ ಪರಾರಿಯಾಗಲು ಯತ್ನಿಸುತ್ತಿದ್ದಾಗ ಈ ಪ್ರಕರಣದ ಪ್ರಮುಖ ಆರೋಪಿಯಾದ ಕುಮಾರ್ ಗುರಪ್ಪ ಬಾಗಲ್ ಕೋಟ್ @ ಕುಮಾರ ಬಿನ್ ಲೇ.|ಗುರಪ್ಪ, (39), #210/2 ಬಿ, ಪ್ಲಾಟ್ ನಂ:21, ಬಾಂಬೆ ಚಾಲ್, ವಿಧಾನ ಸೌಧ ಹಿಂಭಾಗ, ಗೋಕಾಕ್, ಬೆಳಗಾಂ ಜಿಲ್ಲೆ,
ಎಂಬುವವನನ್ನು ಸಿ.ಸಿ.ಬಿ.ಯ ವಿಶೇಷ ತಂಡ ದಿನಾಂಕ: 05-01-2021 ರಂದು ಮಂಡಕಳ್ಳಿಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದು, ಆರೋಪಿಗಳನ್ನು ವಿಚಾರಣೆ ಮಾಡಲಾಗಿ, ಪ್ರಮುಖ ಆರೋಪಿ ಕುಮಾರ್ ಗುರಪ್ಪ ಬಾಗಲ್ ಕೋಟ್ ಈತನು ತಮ್ಮ ಊರಿನ ಕಡೆಯ ಹುಡುಗರುಗಳನ್ನು ಈ ಅಕ್ರಮ ವ್ಯವಹಾರಕ್ಕೆ ಬಳಸಿಕೊಂಡು ಮೈಸೂರು, ಬೆಂಗಳೂರು,ಹೈದರಾಬಾದ್, ಹುಬ್ಬಳ್ಳಿ ಮತ್ತು ಇತರೆ ಕಡೆಗಳಲ್ಲಿ ಈ ನಕಲಿ ಆಯುರ್ವೇದ ಔಷಧಿಗಳ ಕೇಂದ್ರ ತೆಗೆದು ಇವುಗಳ ಸಂಪೂರ್ಣ ಉಸ್ತುವಾರಿಯನ್ನು ನೋಡಿಕೊಂಡು ವಿಮಾನದ ಮೂಲಕ ಓಡಾಡಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದನೆಂಬುದು ಹಾಗೂ ಇದೇ ರೀತಿ ಮೈಸೂರಿನ ವಿದ್ಯಾರಣ್ಯಪುರಂನ ಸಾರ್ವಜನಿಕ ಹಾಸ್ಟಲ್ ರಸ್ತೆ, ಸೇಂಟ್ಥಾ ಮಸ್ ಶಾಲೆ ಎದುರಿನ 8 ನೇ ಮೇನ್, ಮನೆ ನಂ: 05 ರ 1 ನೇ ಮಹಡಿಯಲ್ಲಿ ‘ಪರಂಪರ ಆಯುರ್ವೇದಿಕ್’ ಎಂಬ ಕೇಂದ್ರವನ್ನು ತೆರೆದು ಹಲವಾರು ಅಮಾಯಕರಿಗೆ ನಕಲಿ ಔಷಧಿ ನೀಡಿ ವಂಚಿಸಿದ್ದರೆಂಬ ಅಂಶ ತಿಳಿದು ಬಂದಿರುತ್ತೆ.
ಈತನ ವಿರುದ್ಧ ಈ ಹಿಂದೆ ಹುಬ್ಬಳ್ಳಿ, ಆಂಧ್ರ ಪ್ರದೇಶದಲ್ಲಿ ಇದೇ ರೀತಿಯ ನಕಲಿ ಔಷಧಿ ಮಾರಾಟಕ್ಕೆ
ಸಂಬಧಿಸಿದಂತೆ ವಂಚನೆ ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿರುತ್ತೆ.
ತನಿಖಾ ಕಾಲದಲ್ಲಿ ಆರೋಪಿಗಳ ವಶದಿಂದ ನಕಲಿ ಔಷಧಿಗಳನ್ನು ವಶಪಡಿಸಿಕೊಂಡಿರುತ್ತಾರೆ.
ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿ.ಸಿ.ಪಿ.ಗಳಾದ ಡಾ. ಎ.ಎನ್. ಪ್ರಕಾಶ್ ಗೌಡ,
ಗೀತಪ್ರಸನ್ನರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ.ಘಟಕದ ಎ.ಸಿ.ಪಿ.ರವರಾದ ವಿ.ಮರಿಯಪ್ಪರವರ ನೇತೃತ್ವದಲ್ಲಿ ಸಿ.ಸಿ.ಬಿ.ಘಟಕದ ಪೊಲೀಸ್ ಇನ್ಸ ಪೆಕ್ಟರ್ ರವರಾದ ಆರ್.ಜಗದೀಶ್ ಮತ್ತು ಸಿಬ್ಬಂದಿಗಳು ಮಾಡಿರುತ್ತಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: