ಮೈಸೂರು

ಕಲೆಗೆ ಸಮಾಜವನ್ನು ತಿದ್ದುವ ಸಾಮರ್ಥ್ಯವಿದೆ : ಕಾವೇರಪ್ಪ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ,  ಎಂಎಸ್ ಆರ್ಟ್ ಗ್ಯಾಲರಿ ಹಾಗೂ ಅಮ್ಮಾ ಆರ್ಟ್ ಸ್ಟುಡಿಯೋ ಸಂಯುಕ್ತಾಶ್ರಯದಲ್ಲಿ ಮೈಸೂರಿನ  ಬಲ್ಲಾಳ್ ವೃತ್ತದ ಬಳಿಯಿರುವ ಶ್ರೀ ರವಿವರ್ಮ ಚಿತ್ರಕಲಾ ಶಾಲೆಯಲ್ಲಿ ವಿಶ್ವಕಲಾ ದಿನಾಚರಣೆಯನ್ನುಆಯೋಜಿಸಲಾಗಿತ್ತು.
ಈ ವೇಳೆ ಹಿರಿಯ ಕಲಾವಿದ ಕಾವೇರಪ್ಪ ಮಾತನಾಡಿ, ಕಲೆ ಇಂದು ನಿನ್ನೆ ಹುಟ್ಟಿದ್ದಲ್ಲ. ಮನುಷ್ಯನ ಹುಟ್ಟಿನೊಂದಿಗೆ ಅನಾದಿ ಕಾಲದಿಂದಲೂ ಬೆಳೆದು ಬಂದಿರುವಂಥದ್ದು. ಕಲೆಗೆ ಸಮಾಜವನ್ನು ತಿದ್ದುವ ಸಾಮರ್ಥ್ಯವಿದ್ದು ಕಲಾವಿದರು ಸಾಮಾಜಿಕ ಕಳಕಳಿಯನ್ನು ಬೆಳೆಸಿಕೊಳ್ಳಬೇಕು. ಚಿತ್ರಕಲೆ ಹಲವು ಸಂಶೋಧನೆಗಳಿಗೆ ದಾರಿ ಮಾಡಿಕೊಟ್ಟಿದೆ. ಲಿಪಿ ಇಲ್ಲದ ಕಾಲದಿಂದಲೂ ಮಾರ್ಗದರ್ಶಕ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತಿದೆ. ಅದನ್ನು ಮತ್ತಷ್ಟು ಪರಿಣಾಮಕಾರಿಯಾಗಿ, ಜವಾಬ್ದಾರಿಯುತವಾಗಿ ಮಾಡಬಲ್ಲ ಸಾಮರ್ಥ್ಯ ಕಲಾವಿದರಿಗೆ ಇರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ 30 ಅಡಿ ಬಿಳಿ ಬಣ್ಣದ ಕ್ಯಾನ್ವಸ್‍ನ ಮೇಲೆ ಹಿರಿಯ ಕಲಾವಿದರು ಚಿತ್ರಬಿಡಿಸಿದರೆ, ಮಕ್ಕಳು ತಮಗೆ ತೋಚಿದ ಚಂದದ ಚಿತ್ರಬಿಡಿಸಿ ಸಂಭ್ರಮಿಸಿದರು. ಹಿರಿಯ ಕಲಾವಿದರಾದ ವಿ.ಎ.ದೇಶಪಾಂಡೆ, ಎಸ್.ಎಂ.ಜಂಬುಕೇಶ್ವರ, ಬಸವರಾಜ್ ಮುಸವಳಗಿ, ಎಲ್.ದೇವಣ್ಣ, ಎಂ.ಜಿ.ಮಂಜುಸ್ವಾಮಿ, ಎಚ್.ಎನ್.ರವೀಶ್, ಕಲಾವಿದರಾದ ಹರಿಕಾವ್ಯ, ಎಚ್.ಆರ್.ಶೀನಿವಾಸು, ವಿ.ಜಿ.ಶ್ರೀಧರ್, ಜಯದೇವಣ್ಣ, ಹರ್ಷ ಕಾವಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: