
ಮೈಸೂರು
ಉದ್ಯೋಗ ಕೊಡತಕ್ಕಂತದ್ದಕ್ಕೆ ನೋಟಿಫೀಕೇಶನ್ ಮಾಡಲಾಗಿದೆ : ಸಚಿವ ಎಸ್.ಟಿ.ಸೋಮಶೇಖರ್
ಮೈಸೂರು,ಜ.9:- ಉದ್ಯೋಗ ಕೊಡತಕ್ಕಂತದ್ದಕ್ಕೆ ನೋಟಿಫೀಕೇಶನ್ ಮಾಡಲಾಗಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಮೈಸೂರಿನಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು ಎಲ್ಲ ಇಲಾಖೆಗೂ ಮಾತನಾಡಿದ್ದೇನೆ ಮಾರ್ಚ್ ಏಪ್ರೀಲ್ ಹಾಗೆ ಐದು ಸಾವಿರ ಉದ್ಯೋಗ ಕೊಡಬೇಕು ಅಂತ. ಎಲ್ಲ ಇಲಾಖೆಗಳು ಕೂಡ ಅವರ 2 ಪರ್ಸೆಂಟ್ ಒಳಗಡೆ ಬರಬೇಕು.ಅಷ್ಟರೊಳಗೆ ಬರೋದಿಕ್ಕೆ ಅವರೇ ಮಾಡಿಕೊಳ್ಳಬೇಕು. 2ಪರ್ಸೆಂಟ್ ಮೇಲಿನದಕ್ಕೆ ನಾವು ಅನುಮತಿ ನೀಡಬೇಕು. ಅದಕ್ಕೆ ನಾವು ಅನುಮತಿ ನೀಡುತ್ತೇವೆ ಎನ್ನುವುದನ್ನು ಹೇಳಿದ್ದೇನೆ. ಇಡೀ ಕರ್ನಾಟಕದಲ್ಲಿ ನಮ್ಮ ಸಹಕಾರ ಇಲಾಖೆಯಿಂದಲೂ ಐದು ಸಾವಿರ ಎಂಪ್ಲಾಯ್ ಮೆಂಟ್ ಕೊಡಬೇಕು ಅನ್ನೋದನ್ನು ಹೇಳಿದ್ದೇವೆ ಎಂದು ತಿಳಿಸಿದರು.
ಎಪಿಎಂಸಿ ಕಾಯ್ದೆ ಕುರಿತು 15ನೇ ತಾರೀಖಿನ ನಂತರ ಒಂದು ಸಭೆ ಮಾಡುತ್ತೇನೆ. ಮೈಸೂರಿನಲ್ಲಿ ಸಿಎಂ ಅವರ ಬೇರೆ ಬೇರೆ ಕಾರ್ಯಕ್ರಮ ಇರೋದರಿಂದ ಅದನ್ನು ಮುಂದಕ್ಕೆ ಹಾಕುತ್ತಿದ್ದೇವೆ. ಎಪಿಎಂಸಿ ತಿದ್ದುಪಡಿ ಮಾಡಿದ್ದೇವೆ, ಏನೆಲ್ಲ ಅನುಕೂಲ ಆಗತ್ತೆ. ಮುಂಚೆ ಏನು ಅನಾನುಕೂಲ ಇತ್ತು. ರೈತರಿಗೆ ಏನೆಲ್ಲ ಅನುಕೂಲ ಆಗತ್ತೆ, ಅದನ್ನು ಹೇಳತಕ್ಕಂತದ್ದನ್ನು ಮಾಡಲಾಗುವುದು. ಸೆಸ್ ಅನುಕೂಲವಾಗುವ ರೀತಿಯಲ್ಲಿ ಮಾಡಿದ್ದೇವೆ. 15ರ ನಂತರ ರೈತರ ಮನವೊಲಿಸುವ ಕೆಲಸ ಮಾಡುತ್ತೇವೆ. ವಾಪಸ್ ತಗೊಳೋ ಪ್ರಶ್ನೆಯೇ ಇಲ್ಲ. 12ಸಾವಿರ ಕೋಟಿ ಟಾರ್ಗೆಟ್ ಕೊಟ್ಟಿದ್ದಾರೆ. 15ಸಾವಿರ 300ಕೋಟಿನೂ ಕಂಪ್ಲೀಟ್ ಮಾಡುತ್ತೇವೆ ಎಂದರು. (ಜಿ.ಕೆ,ಎಸ್.ಎಚ್)