ಸುದ್ದಿ ಸಂಕ್ಷಿಪ್ತ

ಕರ್ನಾಟಕ ಕಾವಲುಪಡೆಯ ಆದರ್ಶ ಶಿಕ್ಷಕ-ಶಿಕ್ಷಕಿ ಪ್ರಶಸ್ತಿ ಅರ್ಜಿ ಆಹ್ವಾನ

ಮೈಸೂರು

ಕರ್ನಾಟಕ ಕಾವಲು ಪಡೆಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ 5ನೇ ವರ್ಷ ರಾಜ್ಯಮಟ್ಟದ ಆದರ್ಶ ಶಿಕ್ಷಕ-ಶಿಕ್ಷಕಿ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಲಾಗುತ್ತಿದೆ ಎಂದು ಕಾವಲುಪಡೆಯ ರಾಜ್ಯಾಧ್ಯಕ್ಷ ಎಂ.ಮೋಹನ್ ಕುಮಾರ್ ಗೌಡ ತಿಳಿಸಿದರು.

ಅವರು ನಗರದ ಪತ್ರಕರ್ತರ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಶಿಕ್ಷಣ ಕ್ಷೇತ್ರದಲ್ಲಿ ಗುಣಾತ್ಮಕ ಕಲಿಕೆಗೆ ಒತ್ತು ನೀಡಿ, ವಿದ್ಯಾರ್ಥಿ ಕೇಂದ್ರಿತ ಚಟುವಟಿಕೆಯುಕ್ತ ಬೋಧನೆಯಿಂದ ಬೌದ್ಧಿಕ ಹಾಗೂ ಮನೋವಿಕಾಸಕ್ಕೆ ಶ್ರಮಿಸಿ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಸಮಾಜಮುಖಿ ಚಟುವಟಿಕೆಗಳ ಮೂಲಕ ಭಾಗಿಯಾದ ಶಿಕ್ಷಕರನ್ನು ಪರಿಗಣಿಸಲಾಗುವುದು, ಸ್ವತಃ ಶಿಕ್ಷಕರೇ ಅರ್ಜಿ ಸಲ್ಲಿಸುವಂತಿಲ್ಲ. ಬೋಧಿಸುತ್ತಿರುವ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಂಘ-ಸಂಸ್ಥೆಗಳು, ಎಸ್.ಡಿ.ಎಂ.ಸಿ. ಸದಸ್ಯರು ಅಥವಾ ಇಲಾಖೆ ಅಧಿಕಾರಿಗಳು ಶಿಫಾರಸು ಮಾಡಿ ಅರ್ಜಿ ಸಲ್ಲಿಸಬಹುದು. ಅ.20ರೊಳಗೆ ಅರ್ಜಿಗಳನ್ನು ಎಂ.ಮೋಹನ್ ಕುಮಾರ್ ಗೌಡ, ರಾಜ್ಯಾಧ್ಯಕ್ಷ, ಕರ್ನಾಟಕ ಕಾವಲುಪಡೆ, ರೂ.ನಂ.3, ಅಚ್ಚುಮೆಚ್ವು ಮೊದಲನೇ ಮಹಡಿ, ಸಿಟಿ.ಬಸ್ ನಿಲ್ದಾಣದ ಕಟ್ಟಡ ಮೈಸೂರು ಇಲ್ಲಿಗೆ ತಲುಪಿಸಬೇಕು ಹೆಚ್ಚಿನ ಮಾಹಿತಿಗಾಗಿ 9448528625, 9880977808, 99457296959 ಅಥವಾ 8105086177 ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

Leave a Reply

comments

Related Articles

error: