ಪ್ರಮುಖ ಸುದ್ದಿಮೈಸೂರು

ಸುತ್ತೂರು ಮಠ ಇತರೇ ಮಠಗಳಿಗೆ ಮಾದರಿ,ಮಠದ ಚಟುವಟಿಕೆಗಳಿಗೆ ಸರ್ಕಾರ ಸಹಕರಿಸಲಿದೆ : ಮುಖ್ಯಮಂತ್ರಿ ಬಿಎಸ್ ವೈ

ಶಿವಯೋಗಿಗಳವರ 1061ನೆಯ ಜಯಂತಿ ಮಹೋತ್ಸವ ಉದ್ಘಾಟಿಸಿದ ಮುಖ್ಯಮಂತ್ರಿ ಬಿಎಸ್ ವೈ

ಮೈಸೂರು,ಜ.11:- ಶ್ರೀಮತ್ಸುತ್ತೂರು ಜಗದ್ಗುರು ಶ್ರೀವೀರ ಸಿಂಹಾಸನ ಸಂಸ್ಥಾಪನಾಚಾರ್ಯ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ 1061ನೆಯ ಜಯಂತಿ ಮಹೋತ್ಸವವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.
ಬಳಿಕ ಪಂಚಾಂಗ ಬಿಡುಗಡೆಗೊಳಿಸಿ, ಕೃತಿಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಅವರು ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ 1061 ನೇ ಯ ಜಯಂತಿಯಲ್ಲಿ ಭಾಗಿಯಾಗಿ ಬಹಳ ಸಂತೋಷದಿಂದ ಪಂಚಾಂಗ ,ಕೃತಿ ಬಿಡುಗಡೆ ಮಾಡಿದ್ದೇನೆ.ಶಿವರಾತ್ರೀಶ್ವರರು 10 ಶತಮಾನಗಳ ಹಿಂದೆ ಲೋಕ ಕಲ್ಯಾಣಕ್ಕಾಗಿ ಸುತ್ತೂರಿನ ಕಪಿಲೆ ನದಿ ದಡದಲ್ಲಿ ಮಠ ಸ್ಥಾಪಿಸಿದರು. ಈ ಸಂಸ್ಥಾನ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದೆ. ಈ ವಿದ್ಯಾಸಂಸ್ಥೆಯಲ್ಲಿ ಲಕ್ಷಾಂತರ ಮಕ್ಕಳು ವಿದ್ಯಾಭ್ಯಾಸ ಮಾಡಿದ್ದಾರೆ. ಪ್ರವಾಹ ಬಂದಾಗ ಶ್ರೀ ಮಠ ನೆರವು ನೀಡಿತ್ತು. ಮಹಾಮಾರಿ ಕೊರೋನಾ ಸಂದರ್ಭದಲ್ಲಿ ಸಹಾಯ ಹಸ್ತ ಚಾಚಿದೆ. ಈ ಮಠ ಎಲ್ಲಾ ಕ್ಷೇತ್ರದಲ್ಲೂ ತನ್ನದೇ ಆದ ಚಾಪು ಮೂಡಿಸಿದೆ.ಇವರ ಕೊಡುಗೆ ಅಪಾರ. ಸುತ್ತೂರು ಮಠ ಇತರೇ ಮಠಗಳಿಗೆ ಮಾದರಿ. ಮಠದ ಚಟುವಟಿಕೆಗಳಿಗೆ ಸರ್ಕಾರ ಸಹಕರಿಸಲಿದೆ ಎಂದರು. ಸುತ್ತೂರು ಶ್ರೀಶಿವರಾತ್ರಿ ದೇಶೀಕೇಂದ್ರಸ್ವಾಮೀಜಿ ಸಾನಿಧ್ಯವಹಿಸಿದ್ದರು.
ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್,ಸಚಿವ ನಾರಾಯಣ ಗೌಡ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ತನ್ವೀರ್ ಸೇಠ್, ಎನ್ ಮಹೇಶ್, ನಿರಂಜನ್ ಕುಮಾರ್, ಚಿತ್ರ ನಟ ದೊಡ್ಡಣ್ಣ, ನಿರ್ದೇಶಕ ರಾಜೇಂದ್ರ ಪ್ರಸಾದ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: