ಮೈಸೂರು

ಮಾರಕ ಕೃಷಿ ಮಸೂದೆ ವಿರೋಧಿಸಿ ಜ.26ರಂದು ಸಂಯುಕ್ತ ಹೋರಾಟ-ಕರ್ನಾಟಕ ಸಂಘಟನೆಯಿಂದ ವಿಶಿಷ್ಟ ಗಣರಾಜ್ಯೋತ್ಸವ ಆಚರಣೆ : ಬಡಗಲಪುರ ನಾಗೇಂದ್ರ ಮಾಹಿತಿ

ಮೈಸೂರು,ಜ.11:- ಜ.14ರಂದು ಬೆಂಗಳೂರಿನಲ್ಲಿ ಕೊಂಡಾಜಿರಾವ್ ಸ್ಪೋಟ್ಸ್ &ಗೈಡ್ಸ್ ಸಭಾಂಗಣದಲ್ಲಿ ಮಾರಕ ಕೃಷಿ ವಿರೋಧಿ ಕಾಯ್ದೆ ಕುರಿತು ಬಹಿರಂಗ ಸಂವಾದ ಹಮ್ಮಿಕೊಳ್ಳಲಾಗಿದೆ. ಜನವರಿ 26ರಂದು ಕರ್ನಾಟಕದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಾವಿರಾರು ಟ್ರ್ಯಾಕ್ಟರ್, ಟ್ರಕ್, ಮೋಟಾರ್ ಬೈಕ್, ಎತ್ತಿನ ಬಂಡಿ, ಕುರಿ, ಆಡುಗಳನ್ನು ತೆಗೆದುಕೊಂಡು ಹೋಗುತ್ತೇವೆ. 25ಸಾವಿರಕ್ಕಿಂತ ಹೆಚ್ಚು ಮಂದಿ ಪಾಲ್ಗೊಂಡು ಬೆಂಗಳೂರಿನಲ್ಲಿಯೂ ಪಥಸಂಚಲನ ಮಾಡಿ ಇಲ್ಲೂ ಕೂಡ ಗಣರಾಜ್ಯೋತ್ಸವವನ್ನು ನಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡುತ್ತೇವೆ ಎಂದು ರಾಜ್ಯ ರೈತ ಸಂಘಟನೆಯ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾರಕ ಕೃಷಿ ಮಸೂದೆ ವಿರೋಧಿಸಿ ರೈತರ ಪ್ರತಿಭಟನೆ 47ನೇ ದಿನಕ್ಕೆ ಕಾಲಿಟ್ಟಿದೆ. ಚಳವಳಿ ಇಡೀ ದೇಶದಲ್ಲೇ ನಡೆಯುತ್ತಿದೆ. ನಾವು ಕೂಡ ಹೋಗಿ ಬಂದಿದ್ದೇವೆ. ಈ 14ರಂದು ಐಕ್ಯ ಹೋರಾಟಗಾರರ 50ಯುವಕ ಯುವತಿಯರ ತಂಡ ಕರ್ನಾಟಕರಾಜ್ಯ ರೈತರ ಟೆಂಟ್ ಹಾಕಿ ದೆಹಲ್ಲಿಯಲ್ಲಿ ಧರಣಿ ನಡೆಸಲಿದೆ ಎಂದರು.
ದೇಶದಲ್ಲಿ ಸರ್ಕಾರ ಸತ್ತು ಹೋಗಿದ್ದು, ಜನರ ಪರ ಇಲ್ಲ , ಉತ್ತರದಾಯಿತ್ವ ಆಡಳಿತ ಕೊಡಬೇಕಾದ ಪ್ರಭುತ್ವ ಸಂವಿಧಾನದ ಎಲ್ಲ ಅಂಶಗಳನ್ನೂ ಗಾಳಿಗೆ ತೂರಿ, ಸ್ವತಂತ್ರ ಹೋರಾಟದ ಆಶಯಗಳಿಗೆ ವ್ಯತಿರಿಕ್ತವಾಗಿ, ಆಶೋತ್ತರಗಳಿಗೆ ವಿರುದ್ಧವಾಗಿ ಅಧಿಕಾರ ನಡೆಸುತ್ತಿದೆ. ಭಾರತದ ಎಲ್ಲ ಕ್ಷೇತ್ರಗಳನ್ನು ಒಂದೊಂದಾಗಿ ಖಾಸಗಿ ಆಡಳಿತಕ್ಕೆ ಒಪ್ಪಿಸುತ್ತಿದ್ದು, ಈ ಮೂಲಕ ಕಂಪನಿ ಆಡಳಿತಕ್ಕೆ ಭಾರತವನ್ನು ಒಪ್ಪಿಸುತ್ತಿದೆ. ಅದಾನಿ, ಅಂಬಾನಿಗೋಸ್ಕರವೇ ನಾನು ಅಧಿಕಾರಕ್ಕೆ ಬಂದಿರೋದು ಎಂದು ಪ್ರಧಾನಿ ಮೋದಿಯವರು ತಿಳಿದಂತಿದೆ. 47ದಿನಗಳಿಂದ ರೈತರು ಚಳವಳಿ ನಡೆಸುತ್ತಿದ್ದಾರೆ. ಅವರು ನಡೆಸಿಕೊಳ್ಳುವ ರೀತಿಯಲ್ಲೇ ಇವರ ಆಡಳಿತ ಹೇಗೆ ಎನ್ನುವುದು ಕಂಡು ಬರುತ್ತದೆ. ಹಿಟ್ಲರ್ ಅಂತವನನ್ನೆ ಕೊನೆಗಾಣಿಸಿದ್ದು ಚಳವಳಿ. ನರೇಂದ್ರ ಮೋದಿಯವರು ಅಧಿಕಾರದ ಅವಧಿಯನ್ನು ಕೊನೆಗಾಣಿಸುತ್ತಾರೆ ಎಂದರು.
ಕರ್ನಾಟಕದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿಗೆ ಜ.26ರಂದು ಸಾವಿರಾರು ಟ್ರ್ಯಾಕ್ಟರ್, ಟ್ರಕ್, ಮೋಟಾರ್ ಬೈಕ್, ಎತ್ತಿನ ಬಂಡಿ, ಕುರಿ, ಆಡುಗಳನ್ನು ತೆಗೆದುಕೊಂಡು ಹೋಗುತ್ತೇವೆ. 25ಸಾವಿರಕ್ಕಿಂತ ಹೆಚ್ಚು ಮಂದಿ ಪಾಲ್ಗೊಂಡು ಬೆಂಗಳೂರಿನಲ್ಲಿಯೂ ಪಥಸಂಚಲನ ಮಾಡಿ ಇಲ್ಲೂ ಕೂಡ ಗಣರಾಜ್ಯೋತ್ಸವವನ್ನು ನಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡುತ್ತೇವೆ. ಸಂಯುಕ್ತ ಹೋರಾಟ -ಕರ್ನಾಟಕದಿಂದ ಮಾಡಲಾಗುವುದು. ಕಾರ್ಮಿಕ ಸಂಘಟನೆ, ಮಹಿಳಾ, ವಿದ್ಯಾರ್ಥಿ ಯುವ ಸಂಘಟನೆಗಳು, ದಲಿತ ಸಂಘಟನೆ ಸೇರಿ ಐವತ್ತಕ್ಕೂ ಹೆಚ್ಚು ಸಂಘಟನೆಗಳು ಸೇರಿ ಸಂಯುಕ್ತ ಹೋರಾಟ-ಕರ್ನಾಟಕ ಸಂಘಟನೆ ಆಗಿದ್ದು, ಅದರ ವತಿಯಿಂದ ಈ ಹೋರಾಟ ನಡೆಸಲಾಗುವುದು. 7ಜನ ಸಂಯೋಜಕರಲ್ಲಿ ನಾನು ಕೂಡ ಒಬ್ಬ, 21ಜನ ಕೋರ್ ಕಮಿಟಿಗೆ ಸದಸ್ಯರಿದ್ದಾರೆ. ಕುರುಬೂರು ಶಾಂತಕುಮಾರ್ ಇದ್ದಾರೆ, ಕೋಡಿಹಳ್ಳಿ ಚಂದ್ರಶೇಖರ್, ಗಾಯತ್ರಿ , ಚಾಮರಾಜ ಮಾಲೀ ಪಾಟೀಲ್ ಕೂಡ ಇದ್ದಾರೆ. ಒಂದು ಕೋಟಿ ಕರಪತ್ರ ಮುದ್ರಣ ಮಾಡಿ ಪ್ರತಿ ಹಳ್ಳಿ, ನಗರಗಳಿಗೂ ಕೃಷಿ ಕಾಯ್ದೆಯಿಂದಾಗುವ ಅನಾಹುತಗಳ ಬಗ್ಗೆ ಮನವರಿಕೆ ಮಾಡುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.
ಜ.14ರಂದು ಬೆಂಗಳೂರಿನಲ್ಲಿ ಕೊಂಡಾಜಿರಾವ್ ಸ್ಪೋಟ್ಸ್ &ಗೈಡ್ಸ್ ಸಭಾಂಗಣದಲ್ಲಿ ಬಹಿರಂಗ ಸಂವಾದ ಹಮ್ಮಿಕೊಳ್ಳಲಾಗಿದೆ. ರಾಜಕೀಯ ಚಿಂತಕರು, ಯದುವೀರ್ ಸಿಂಗ್ ಸೇರಿದಂತೆ ವಿಚಾರವಾದಿಗಳು ಪಾಲ್ಗೊಳ್ಳಲಿದ್ದಾರೆ. ಆಂಧ್ರ, ತೆಲಂಗಾಣ, ಕೇರಳ, ಮಹಾರಾಷ್ಟ್ರದಿಂದಲೂ ದಕ್ಷಿಣದಲ್ಲಿ ಹೋರಾಟವನ್ನು ಗಟ್ಟಿಯಾಗಿ ಕಟ್ಟಲು ಬರಲಿದ್ದಾರೆ ಎಂದು ಮಾಹಿತಿ ನೀಡಿದರು.

ಏಷಿಯನ್ ಪೇಂಟ್ಸ್ ನಲ್ಲಿ ಭೂಮಿ ಕೊಟ್ಟವರು ನ್ಯಾಯ ಕೇಳುತ್ತಿದ್ದಾರೆ. ಮುಖ್ಯಮಂತ್ರಿಗಳು ಮೈಸೂರು ಜಿಲ್ಲೆ ಪ್ರವಾಸದಲ್ಲಿದ್ದಾರೆ. ಚಳವಳಿ ನಡೆಯುತ್ತಿರುವ ಪಕ್ಕದಲ್ಲೇ ಸುತ್ತೂರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಚಳವಳಿ ನಡೆಯುತ್ತಿರುವ ಸ್ಥಳಕ್ಕೆ ಹೋಗಿಲ್ಲ. ಸರ್ಕಾರ ಒಂದು ಕಂಪನಿಗೆ ಹೆದರಿ ಭೂಮಿ ಕಳೆದುಕೊಂಡವರಿಗೆ ನ್ಯಾಯ ಕೊಡಿಸುವಲ್ಲಿ ವಿಫಲವಾದರೆ ಚಳವಳಿ ನಿರಂತರವಾಗಿ ನಡೆಯುತ್ತದೆ. ಸಾವಿರಾರು ಸಂಖ್ಯೆಯಲ್ಲಿ ರೈತರು ಬೆಂಗಳೂರಿಗೆ ಹೋಗಿ ಅಲ್ಲಿ ಧರಣಿ ನಡೆಸುತ್ತೇವೆ. ಯಾವಾಗ ಧರಣಿ ನಡೆಸುತ್ತೇವೆಂದು ಶೀಘ್ರದಲ್ಲೇ ತಿಳಿಸಲಾಗುವುದು. ಸಿಎಂ ಒಂದು ಸರ್ಕಾರದ ಮುಖ್ಯಸ್ಥರಾಗಿ ಖಡಕ್ ಆಗಿ ಎಚ್ಚರಿಕೆ ನೀಡಬೇಕು. ಕೆಲಸ ಕೊಡಬೇಕು, ಇಲ್ಲದಿದ್ದಲ್ಲಿ ಭೂಮಿ ವಾಪಸ್ ಕೊಡಲಿ ಎಂದು ಆಗ್ರಹಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: