ಕರ್ನಾಟಕಪ್ರಮುಖ ಸುದ್ದಿ

ಶ್ರೀನಗರ ಉಪಚುನಾವಣೆಯಲ್ಲಿ ಗೆದ್ದ ಫಾರೂಕ್ ಅಬ್ದುಲ್ಲಾ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ಲೋಕಭೆಯ ಶ್ರೀನಗರ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಗೆದ್ದು ಸಂಸತ್ತಿಗೆ ಆಯ್ಕೆಯಾಗಿದ್ದಾರೆ.

ಆಡಳಿತಾರೂಢ ಪೀಪಲ್ಸ್ ಡೆಮಾಕ್ರಾಟಿಕ್ ಪಾರ್ಟಿ – ಪಿಡಿಪಿ ಅಭ್ಯರ್ಥಿ ನಾಸಿರ್ ಅಹಮದ್ ಖಾನ್ ಅವಗಿಂತ 9 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದು ಫರೂಕ್ ಆಯ್ಕೆಯಾಗಿದ್ದಾರೆ. ಈ ಕ್ಷೇತ್ರದಲ್ಲಿ 2014ರ ಲೋಕಸಭೆ ಚುನಾವಣೆಯಲ್ಲಿ ಪಿಡಿಪಿಯಿಂದ ಕಾರೀಖ್ ಖರ್ರಾ ಸ್ಪರ್ಧಿಸಿ ಗೆದ್ದಿದ್ದರು. ಆದರೆ ನಂತರ ಅವರು ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಯಾದ ಕಾರಣ ಉಪಚುನಾವಣೆ ನಡೆಸಲಾಗಿದೆ.

ಹಿಂಸಾಚಾರದ ನಡುವೆ ಎದ್ದು ಬಂದ ಫಾರೂಕ್‍ :

ಈ ಕ್ಷೇತ್ರದಲ್ಲಿ ಮೊದಲಿಗೆ ಏಪ್ರಿಲ್ 9 ರಂದು ಮತದಾನ ನಿಗದಿ ಪಡಿಸಲಾಗಿತ್ತಾದರೂ ಹಿಂಸಾಚಾರದಿಂದಾಗಿ ಚುನಾವಣೆಯನ್ನು ಮುಂದೂಡಲಾಗಿತ್ತು. ಮತ್ತೆ ಗುರುವಾರ ನಡೆದ ಮರು ಮತದಾನದಲ್ಲಿ ಶೇ.7 ರಷ್ಟು ಮತದಾರರು ಮಾತ್ರ ತಮ್ಮ ಹಕ್ಕುಗಳನ್ನು ಚಲಾಯಿಸಿದ್ದರು. ಇಂದು ಮತ ಎಣಿಕೆಯ ಆರಂಭದಿಂದಲೂ ತಮ್ಮ ಪ್ರತಿಸ್ಪರ್ಧಿ ವಿರುದ್ಧ ಮುನ್ನಡೆ ಸಾಧಿಸಿದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬುಲ್ಲಾ ಅವರು ಗೆಲುವು ಸಾಧಿಸಿದರು. ಒಟ್ಟು ಒಂಬತ್ತು ಅಭ್ಯರ್ಥಿಗಳು ಕಣದಲ್ಲಿದ್ದರೂ ಅಬುಲ್ಲಾ ಮತ್ತು ಖಾನ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು.

ಉಪಚುನಾವಣೆ ಸಂದರ್ಭ ವ್ಯಾಪಕ ಹಿಂಸಾಚಾರ ಸಂಭವಿಸಿದ್ದ ಕಾರಣ ಅತಿ ಕಡಿಮೆ ಮತದಾನ ದಾಖಲಾಗಿದ್ದರೂ ಲೋಕಸಭೆ ಪ್ರವೇಶಿಸುವಲ್ಲಿ ಹಿರಿಯ ರಾಜಕಾರಣಿ ಫಾರೂಕ್ ಅಬ್ದುಲ್ಲಾ ಯಶಸ್ವಿಯಾಗಿದ್ದಾರೆ.

(ಎನ್‍.ಬಿ.ಎನ್)

Leave a Reply

comments

Related Articles

error: