ಮೈಸೂರು

ಮೈ ರೋಮಾಂಚನಗೊಳ್ಳಿಸುತ್ತಿವೆ ವಿವಿಧ ಕಸರತ್ತುಗಳು : ಗ್ರೇಟ್ ಬಾಂಬೇ ಸರ್ಕಸ್ ಗೆ ಚಾಲನೆ

ವಿವಿಧ ರೀತಿಯ ಪ್ರಾಣಿ ಪಕ್ಷಿಗಳ ಸಾಹಸ, ಒಂದು ಕಡೆಯಿಂದ, ಇನ್ನೊಂದು ಕಡೆಗೆ ಹಗ್ಗದ ಸಹಾಯದಿಂದ ನೆಗೆಯುವ ಯುವತಿಯರು ಇವೆಲ್ಲವನ್ನೂ ಉಸಿರು ಬಿಗಿ ಹಿಡಿದು ನೋಡುವ ಸರದಿ ನಿಮ್ಮದು. ಯಾಕೆಂದರೆ ಸಾಂಸ್ಕೃತಿಕ ನಗರಿ ಮೈಸೂರಿಗೆ ಬಾಂಬೇ ಸರ್ಕಸ್ ಕಾಲಿರಿಸಿದೆ.

ಬೇಸಿಗೆಯ ರಜಾ ಆರಂಭವಾಗಿದೆ. ಮಕ್ಕಳು ಬೇಸಿಗೆ ಶಿಬಿರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದೀಗ ಸಾಂಸ್ಕೃತಿಕ ನಗರಿಯ ಜನತೆಯನ್ನು ರಂಜಿಸಲು ಮೈಸೂರಿಗೆ ಸರ್ಕಸ್ ಕೂಡಾ ಕಾಲಿರಿಸಿದ್ದು ಇನ್ನಷ್ಟು ಸಂತಸ ನೀಡಿದೆ.

ಮೈಸೂರಿನ ನಜರ್ ಬಾದ್ ನಲ್ಲಿ ಗ್ರೇಟ್  ಬಾಂಬೇ ಸರ್ಕಸ್ ನ್ನು ರಾಜವಂಶಸ್ಥ ಯದುವೀರಕೃಷ್ಣದತ್ತ ಚಾಮರಾಜ ಒಡೆಯರ್  ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.   ಈ ಸಂದರ್ಭ ರಾಜಮಾತೆ ಪ್ರಮೋದಾದೇವಿ ಒಡೆಯರ್, ಮಾಜಿ ಸಚಿವ ಎಸ್.ಎ.ರಾಮದಾಸ್ ಮತ್ತಿತರರು ಉಪಸ್ಥಿತರಿದ್ದರು.  ಸರ್ಕಸ್ ನಲ್ಲಿ ಸಾಹಸಮಯ ಕ್ರೀಡಾ ಪ್ರದರ್ಶನವನ್ನು ನೋಡುತ್ತಿದ್ದರೆ ಜೀವನಕ್ಕೆ ಅತಿ ಅವಶ್ಯಕವಾಗಿರುವ ಸಮಯ ಪ್ರಜ್ಞೆಯ ಮಹತ್ವವನ್ನು ತಮ್ಮ ಜೀವನದಲ್ಲಿ ಹಾಗೂ ಪ್ರದರ್ಶನದಲ್ಲಿ ಅಳವಡಿಸಿಕೊಂಡಿರುವುದರ ಬಗ್ಗೆ ತಿಳಿದು ಬರುತ್ತದೆ.

ಇವುಗಳ ನಡುವೆ ಮುಂದಿನ ಪ್ರದರ್ಶನಕ್ಕೆ ಬಹಳ ಅಚ್ಚು ಕಟ್ಟಾಗಿ ವ್ಯವಸ್ಥೆ ಮಾಡುವ ಹುಡುಗರನ್ನು ಶ್ಲಾಘಿಸಲೇಬೇಕು. ಮಕ್ಕಳನ್ನು ರಂಜಿಸಲು ನುರಿತ ಅನುಭವಿ ಸ್ಪರ್ಧಿಗಳಾದ ವಿದೂಷಕರು ಹಾಗೂ ಈ ಸಾಹಸ ಪ್ರದರ್ಶನದಲ್ಲಿ ಗಂಡಿಗೆ ಸರಿಸಮಾನವಾಗುವಂತೆ ಸಾಹಸ ಪ್ರದರ್ಶನ ನೀಡುವ ಯುವತಿಯರು ಕಸರತ್ತುಗಳು ಮೈ ರೋಮಾಂಚನಗೊಳಿಸುತ್ತಿವೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: