ಕ್ರೀಡೆಮನರಂಜನೆ

ಬಾಲಿವುಡ್ ನಟಿ ಅನುಷ್ಕಾ- ಕ್ರಿಕೆಟಿಗ ವಿರಾಟ್ ಕೊಯ್ಲಿ ಪುತ್ರಿ ಹೆಸರು ‘ಅನ್ವಿ’ ?

ದೇಶ(ನವದೆಹಲಿ)ಜ.12:- ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮಗಳಿಗೆ ಜನ್ಮ ನೀಡಿದ್ದಾರೆ. ಕ್ರಿಕೆಟಿಗ ವಿರಾಟ್ ಕೊಹ್ಲಿ ತಂದೆಯಾಗಿರುವ ಖುಷಿಯನ್ನು ಸೋಮವಾರ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡರು.
ಆ ಸಮಯದಿಂದ ಈಗಿನವರೆಗೂ ಅಭಿಮಾನಿಗಳು ಅವರಿಗೆ ಶುಭಾಶಯಗಳನ್ನು ನಿರಂತರವಾಗಿ ಕಳುಹಿಸುತ್ತಿದ್ದಾರೆ. ಈ ಒಳ್ಳೆಯ ಸುದ್ದಿ ಕೇಳಿದ ನಂತರ, ಅಭಿಮಾನಿಗಳು ಅವರು ತಮ್ಮ ಮಗಳಿಗೆ ಏನು ಹೆಸರಿಸಿಟ್ಟಿರಬಹುದೆಂದು ತಿಳಿಯಲು ಬಯಸಿದ್ದಾರೆ.

ಸುದ್ದಿಯೊಂದರ ಪ್ರಕಾರ, ಈ ದಂಪತಿಗಳು ತಮ್ಮ ಮಗಳಿಗೆ ಅನ್ವಿ ಎಂದು ಹೆಸರಿಸಿದ್ದಾರೆ. ಇದು ಅನುಷ್ಕಾ ಮತ್ತು ವಿರಾಟ್ ಹೆಸರುಗಳಿಂದ ಕೂಡಿದೆ. ಅನ್ವಿ ಎಂದರೆ ಹಿಂದೂ ಧರ್ಮದ ಹೆಸರು ಮತ್ತು ಇದನ್ನು ಅತ್ಯಂತ ಶುಭ ಹೆಸರು ಎಂದು ಪರಿಗಣಿಸಲಾಗಿದೆ. ಲಕ್ಷ್ಮಿ ದೇವಿಯನ್ನು ಈ ಹೆಸರಿನಿಂದ ಕರೆಯಲಾಗುತ್ತದೆ. ಈಗ ಲಕ್ಷ್ಮಿಯೇ ಈ ದಂಪತಿಗಳ ಮನೆಗೆ ಬಂದಿದ್ದಾಳೆ, ಎಂದಾದಮೇಲೆ ಅವರ ಹೆಸರು ಯಾಕೆ ಹೀಗಾಗಿರಬಾರದು ಎಂದು ಮಾಧ್ಯಮವೊಂದು ವರದಿ ಮಾಡಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: