
ಕ್ರೀಡೆದೇಶಪ್ರಮುಖ ಸುದ್ದಿ
ಕೋವಿಡ್ 19 ಪರೀಕ್ಷಾ ವರದಿ ಇನ್ನೂ ಸಿಕ್ಕಿಲ್ಲ, ಇದು ಗೊಂದಲಮಯವಾಗಿದೆ: ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್
ನವದೆಹಲಿ,ಜ.12-ತನಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಡಿಸುವ ವರದಿ ಸಿಕ್ಕಿಲ್ಲ ಎಂದು ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಹೇಳಿದ್ದಾರೆ.
ಸೈನಾ ನೆಹ್ವಾಲ್ ಗೆ ಕೋವಿಡ್ ಸೋಂಕು ತಗುಲಿದೆ ಎಂಬ ವಿಚಾರದ ಕುರಿತು ಟ್ವೀಟ್ ಮಾಡಿರುವ ಅವರು, ನಾನು ನಿನ್ನೆಯಿಂದ ಇನ್ನೂ ಕೋವಿಡ್ ಪರೀಕ್ಷಾ ವರದಿಯನ್ನು ಸ್ವೀಕರಿಸಿಲ್ಲ. ಇದು ತುಂಬಾ ಗೊಂದಲಮಯವಾಗಿದೆ. ಇಂದು ಪಂದ್ಯದ ಅಭ್ಯಾಸಕ್ಕೆ ಸ್ವಲ್ಪ ಮೊದಲು ಅವರು ಬ್ಯಾಂಕಾಕ್ನಲ್ಲಿ ಆಸ್ಪತ್ರೆಗೆ ಹೋಗಬೇಕೆಂದು ಅವರು ಹೇಳುತ್ತಾರೆ. ನಾನು ಸಕಾರಾತ್ಮಕ ಎಂದು ಹೇಳುತ್ತಿದ್ದೇನೆ. ನಿಯಮದ ಪ್ರಕಾರ ಪರೀಕ್ಷೆಗೆ ಒಳಪಟ್ಟ ಬಳಿಕ 5 ಗಂಟೆಗಳಲ್ಲಿ ವರದಿ ಬರಬೇಕು. ಆದರೆ ಇನ್ನು ವರದಿ ನನ್ನ ಕೈ ತಲುಪಿಲ್ಲ ಎಂದಿದ್ದಾರೆ.
ಇದರಿಂದ ಸೈನಾ ನೆಹ್ವಾಲ್ ಗೆ ಕೋವಿಡ್ ಸೋಂಕು ತಗುಲಿರುವುದು ಖಚಿತವಾಗಿಲ್ಲ. ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ ಭಾರತೀಯ ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್, ಎಚ್.ಎಸ್.ಪ್ರಣಯ್ ಗೆ ಕೋವಿಡ್ ಸೋಂಕು ತಗುಲಿದೆ ಎಂದು ಟ್ವೀಟ್ ಮಾಡಿತ್ತು.
ಇಬ್ಬರಿಗೂ ಸೋಂಕು ತಗುಲಿರುವುದರಿಂದ ಥಾಯ್ಲೆಂಡ್ ಓಪನ್ ಬ್ಯಾಟ್ಮಿಂಟನ್ ಟೆನ್ನಿಸ್ ಟೂರ್ನಿಯಿಂದ ಹಿಂದೆ ಸರಿಯಲಿದ್ದಾರೆ ಎಂದು ಹೇಳಿತ್ತು. ಇದೀಗ ಸೈನಾ ನೆಹ್ವಾಲ್ ಸೋಂಕು ತಗುಲಿರುವ ಬಗ್ಗೆ ಗೊಂದಲವಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್, ಎಂ.ಎನ್)