ಮೈಸೂರು

ಸ್ವಾಮಿ ವಿವೇಕಾನಂದರ 158 ನೇ ಜಯಂತ್ಯೋತ್ಸವ ಆಚರಣೆ :ವಿವೇಕ ಸಾಹಿತ್ಯ ರತ್ನ ಪ್ರಶಸ್ತಿ ಪ್ರದಾನ

ಮೈಸೂರು,ಜ.12:- ವಿಶ್ವ ಹಿಂದೂ ಧರ್ಮ ಸಂರಕ್ಷಣಾ ವೇದಿಕೆಯಿಂದ ಇಂದು ಸ್ವಾಮಿ ವಿವೇಕಾನಂದರ 158 ನೇ ಜಯಂತ್ಯೋತ್ಸವ ಹಾಗೂ ರಾಷ್ಟ್ರೀಯ ಯುವ ದಿನ ಆಚರಣೆಯನ್ನು ವಿವೇಕಾನಂದರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೂಲಕ ಗಣ್ಯರಾದ ಡಾ.ಶೆಲ್ವಪಿಳ್ಳೈ ಐಯ್ಯಂಗಾರ್ ಅವರಿಗೆ – ವಿವೇಕ ವಿದ್ಯಾ ರತ್ನ , ಡಾ.ಕೆ ರಘುರಾಮ್ ವಾಜಪೇಯಿ – ವಿವೇಕ ಧರ್ಮ ರತ್ನ , ಕೆ.ಸ್ ರಂಗಪ್ಪ ಅವರಿಗೆ ವಿವೇಕ ವಿಜ್ಞಾನ ರತ್ನ , ಪ್ರಕಾಶ್ ಬಾಬು – ವಿವೇಕ ಸಾಹಿತ್ಯ ರತ್ನ ನೀಡಿ ಗೌರವಿಸಲಾಯಿತು.
ಮಾಜಿ ನಗರ ಪಾಲಿಕೆ ಸದಸ್ಯರಾದ ನಂದೀಶ್ ಪ್ರೀತಮಂ ಮೈಸೂರ ನಗರ ಪಾಲಿಕೆ ಸದಸ್ಯರಾದ ರಮೇಶ್ ,ಬಿ.ವಿ ರವೀಂದ್ರ ಬಿ.ಜೆ.ಪಿಯ ಜೆ.ಪಿ ಅವರಿಗೆ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಧರ್ಮ ಸಂರಕ್ಷಣಾ ವೇದಿಕೆ ಅಧ್ಯಕ್ಷರಾದ ಸ್ವಾಮಿ ಗೌಡ , ಮೈಸೂರು ಮಹಾನಗರ ಪಾಲಿಕೆ ಕನ್ನಡ ಜಾಗೃತಿ ಸಮಿತಿಯ ಸದಸ್ಯರಾದ ಅರವಿಂದ್ ಶರ್ಮ ಇತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: