ಕ್ರೀಡೆದೇಶಪ್ರಮುಖ ಸುದ್ದಿ

ಸೈನಾ ನೆಹ್ವಾಲ್ ಮತ್ತು ಎಚ್.ಎಸ್.ಪ್ರಣಯ್ ಕೊರೋನಾ ವರದಿ ನೆಗೆಟಿವ್ : ಥೈಲ್ಯಾಂಡ್ ಓಪನ್‌ ನಲ್ಲಿ ಆಟ

ದೇಶ(ನವದೆಹಲಿ)ಜ.13:- ಭಾರತದ ಮಹಿಳಾ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಬುಧವಾರ ಥೈಲ್ಯಾಂಡ್ ಓಪನ್ ‌ನಲ್ಲಿ ಆಡಲಿದ್ದಾರೆ.
ಸೈನಾ ನೆಹ್ವಾಲ್ ಮತ್ತು ಎಚ್.ಎಸ್.ಪ್ರಣಯ್ ಅವರ ಕೋವಿಡ್ -19 ರ ಹೊಸ ಪರೀಕ್ಷೆ ನಕಾರಾತ್ಮಕವಾಗಿದೆ. ವಾಸ್ತವವಾಗಿ, ಅದಕ್ಕೂ ಮೊದಲು ಸೈನಾದ ಕೊರೋನಾ ವರದಿ ಪಾಸಿಟಿವ್ ಬಂಧಿತ್ತು. ಇದರ ನಂತರ ಅವರು ಥೈಲ್ಯಾಂಡ್ ಓಪನ್‌ ನಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಹೇಳಲಾಗಿತ್ತು. ಆದರೆ, ಈಗ ಅವರಿಗೆ ಅನುಮತಿ ಸಿಕ್ಕಿದೆ.
ಇದಕ್ಕೂ ಮೊದಲು, ಲಂಡನ್ ಒಲಿಂಪಿಕ್ಸ್ (2012) ಕಂಚಿನ ಪದಕ ವಿಜೇತರು ಕೋವಿಡ್ -19 ಪ್ರೋಟೋಕಾಲ್ ಅಡಿಯಲ್ಲಿ ಬಿಡಬ್ಲ್ಯೂಎಫ್ ವಿಧಿಸಿರುವ ನಿರ್ಬಂಧಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಹಲವಾರು ಟ್ವೀಟ್‌ ಗಳನ್ನು ಮಾಡಿದ್ದಾರೆ. “ತನಿಖೆಯಲ್ಲಿ ಎಲ್ಲರೂ ನಕಾರಾತ್ಮಕವಾಗಿದ್ದರೂ ವೈದ್ಯರು ಮತ್ತು ತರಬೇತುದಾರರು ನಮ್ಮನ್ನು ಭೇಟಿಯಾಗಲು ಸಾಧ್ಯವಿಲ್ಲವೇ?” ಎಂದು ಸೈನಾ ಟ್ವೀಟ್ ಮಾಡಿದ್ದಾರೆ. ನಾವು ನಾಲ್ಕು ವಾರಗಳವರೆಗೆ ನಮ್ಮನ್ನು ನಾವು ಫಿಟ್ ಆಗಿ ಹೇಗೆ ಇಟ್ಟುಕೊಳ್ಳೋದು, ನಾವು ಉತ್ತಮ ಸ್ಥಿತಿಯಲ್ಲಿ ಪಂದ್ಯಾವಳಿಯನ್ನು ಆಡಲು ಬಯಸುತ್ತೇವೆ. ದಯವಿಟ್ಟು ಇದಕ್ಕೆ ಪರಿಹಾರ ಹುಡುಕಿ ಎಂದಿದ್ದಾರೆ ” (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: