ದೇಶಪ್ರಮುಖ ಸುದ್ದಿ

ದೇಶದಲ್ಲಿ 24ಗಂಟೆಗಳಲ್ಲಿ 15,968 ಕೊರೋನಾ ಸೋಂಕಿತರು ಪತ್ತೆ

ದೇಶ(ನವದೆಹಲಿ),ಜ.13:- ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 15,968 ಹೊಸ ಕೊರೋನಾ ಪ್ರಕರಣಗಳು ದಾಖಲಾಗಿವೆ. ಕೊರೋನಾದಿಂದಾಗಿ, 202 ಮಂದಿ ಸಾವನ್ನಪ್ಪಿದ್ದಾರೆ.
ದೇಶದ ಒಟ್ಟು ಕೊರೋನಾ ರೋಗಿಗಳ ಸಂಖ್ಯೆ 1,04,95,147ಕ್ಕೇರಿದ್ದು, ಅದರಲ್ಲಿ 2,14,507 ಸಕ್ರಿಯ ಪ್ರಕರಣಗಳಿವೆ. ಅದೇ ವೇಳೆ ಕೊರೋನಾದಿಂದ ಒಟ್ಟು 1,51,529 ಮಂದಿ ಸಾವನ್ನಪ್ಪಿದ್ದಾರೆ.
ಜನವರಿ 12 ರವರೆಗೆ ದೇಶದಲ್ಲಿ ಒಟ್ಟು 18,34,89,114 ಮಾದರಿ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ. ಇದರಲ್ಲಿ ಹಿಂದಿನ ದಿನ 8,36,227 ಮಾದರಿ ಪರೀಕ್ಷೆಗಳನ್ನು ಮಾಡಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: