ಮನರಂಜನೆ

ಬಾಲಿವುಡ್ ನಟ ವರುಣ್ ಧವನ್ ವಿವಾಹಕ್ಕೆ ಹೋಟೆಲ್ ಬುಕ್ : ಅತಿಥಿಗಳ ಪಟ್ಟಿಯೂ ಸಿದ್ಧ !

ದೇಶ(ಮುಂಬೈ)ಜ.13:- ಬಾಲಿವುಡ್ ನಟ ವರುಣ್ ಧವನ್ ವಿವಾಹವಾಗುತ್ತಿದ್ದಾರಂತೆ. ಅವರು ತಮ್ಮ ಬಹುಕಾಲದ ಗೆಳತಿ ನತಾಶಾ ದಲಾಲ್ ಅವರನ್ನು ಮದುವೆಯಾಗಲಿದ್ದಾರೆ.
ಅಲಿಬಾಗ್ನ ಪಂಚತಾರಾ ಹೋಟೆಲ್ ನಲ್ಲಿ ವರುಣ್ ಮತ್ತು ನತಾಶಾ ವಿವಾಹವಾಗಲಿದ್ದು, ಈ ಹೋಟೆಲ್ ಅನ್ನು ಬುಕ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಸ್ಥಳವನ್ನು ನೋಡಿದ ನಂತರ ವರುಣ್ ಇದನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ವರುಣ್ ಮತ್ತು ನತಾಶಾ ಅವರ ಮದುವೆಗೆ ಬರುವ 200 ಅತಿಥಿಗಳ ಪಟ್ಟಿಯನ್ನು ಸಹ ಸಿದ್ಧಪಡಿಸಲಾಗಿದೆ ಎನ್ನಲಾಗುತ್ತಿದೆ.
ಮಾಧ್ಯಮವೊಂದರಲ್ಲಿ ಪ್ರಕಟವಾದ ವರದಿಯ ಪ್ರಕಾರ, ಅಲಿಬಾಗ್ ನ ಪಂಚತಾರಾ ಹೋಟೆಲ್ ನ್ನು ಕಾಯ್ದಿರಿಸಲಾಗಿದೆ. ಇದಕ್ಕಾಗಿ ಮುಂಗಡ ಕೂಡ ನೀಡಲಾಗಿದೆ. ಸಿದ್ಧತೆಗಳನ್ನು ಜೋರಾಗಿ ಮಾಡಿಕೊಳ್ಳಲಾಗುತ್ತಿದೆ, ಆದರೆ ಯಾವ ದಿನಾಂಕದಂದು ಇಬ್ಬರೂ ವಿವಾಹವಾಗುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಹೇಳಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: