ಕ್ರೀಡೆಮೈಸೂರು

ಮೈಸೂರು ವಲಯ ಅಂಡರ್ 19 ತಂಡಕ್ಕೆ ಆಟಗಾರರ ಆಯ್ಕೆ ಪ್ರಕ್ರಿಯೆ

ಮೈಸೂರು,ಜ.13-ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯವರು ಇಂದು ನಗರದ ಮಾನಸ ಗಂಗೋತ್ರಿಯಲ್ಲಿರುವ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ಅಂಡರ್ 19 ಕ್ರಿಕೆಟ್ ತಂಡಕ್ಕೆ ಆಟಗಾರರ ಆಯ್ಕೆ ಪ್ರಕ್ರಿಯೆಯನ್ನು ನಡೆಸಿದರು.

ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಂದ 185 ಮಂದಿ ಆಟಗಾರರು ಆಯ್ಕೆ ಪ್ರಕ್ರಿಯೆಲ್ಲಿ ಭಾಗವಹಿಸಿದ್ದಾರೆ.  ಇದರಲ್ಲಿ ಆಯ್ಕೆಯಾದ ಆಟಗಾರರು ಮುಂದಿನ ತಿಂಗಳು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಅಂತರ ವಲಯ ಅಂಡರ್ 19 ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮೈಸೂರು ವಲಯ ಸಂಚಾಲಕ ಸುಧಾಕರ್ ರೈ, ಇಂದು ಮೈಸೂರು ವಲಯ ಅಂಡರ್ 19 ತಂಡಕ್ಕಾಗಿ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಂದ 185 ಆಟಗಾರರು ಆಗಮಿಸಿದ್ದಾರೆ ಎಂದರು.

ಇವರಲ್ಲಿ ಆಯ್ಕೆಯಾದವರಲ್ಲಿ ಒಂದು ತಂಡಕ್ಕೆ 13 ಮಂದಿಯಂತೆ 5 ತಂಡ ರಚಿಸುತ್ತೇವೆ. ಮೈಸೂರು 3 ತಂಡ, ಮಂಡ್ಯ, ಚಾಮರಾಜನಗರ ತಲಾ 1 ತಂಡ ಮಾಡುತ್ತೇವೆ. ಈ 5 ತಂಡಗಳ ನಡುವೆ ಫೆಬ್ರವರಿ 1 ರಿಂದ ಪಂದ್ಯಗಳನ್ನು ಆಡಿಸಿ ಇದರಲ್ಲಿ ಉತ್ತಮವಾಗಿ ಆಡುವ 15 ಮಂದಿಯನ್ನು ಆಯ್ಕೆ ಮಾಡಿ ಮೈಸೂರು ವಲಯ ತಂಡವನ್ನು ಮಾಡುತ್ತೇವೆ ಎಂದರು.

ಉತ್ತಮವಾಗಿ ಆಡುವ 15 ಮಂದಿಯ ಜೊತೆಗೆ 5 ಸ್ಟ್ಯಾಂಡ್ ಬೈ ಆಟಗಾರರನ್ನು ಆಯ್ಕೆ ಮಾಡಲಾಗುವುದು. ಈ ಆಟಗಾರರು ಸ್ಪೋರ್ಟ್ಸ್ ಕ್ಲಬ್ ಗೆ ಆಡುತ್ತಾರೆ. ಹೀಗಾಗಿ ಅಲ್ಲಿನ ಆಟವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತೇವೆ. ಆಯ್ಕೆಯಾದ ಆಟಗಾರರು ಮುಂದಿನ ತಿಂಗಳು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಅಂತರ ವಲಯ ಅಂಡರ್ 19 ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಕಳೆದ ಎರಡು ತಿಂಗಳಿಂದ ಕ್ರಿಕೆಟ್ ಚಟುವಟಿಕೆಯನ್ನು ಆರಂಭಿಸಿದ್ದು, ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಆಯ್ಕೆ ಸಮಿತಿಯಲ್ಲಿ ರಣಜಿಯ ಮಾಜಿ ಕ್ರಿಕೆಟಿಗ, ಆಯ್ಕೆ ಸಮಿತಿಯ ಅಧ್ಯಕ್ಷ ಸುರೇಶ್ ಅಂಬಾಳಿ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮೈಸೂರು ಜೋನ್ ನ ಅಧ್ಯಕ್ಷ ಹರಿಕೃಷ್ಣ, ಆಯ್ಕೆದಾರರಾದ ಸಿ.ಕೆ.ಮುರಳೀಧರ್, ದೀಪಕ್ ಶ್ರೀನಿವಾಸ್, ಕೆ.ಆರ್.ಪವನ್ ಕುಮಾರ್ ಇದ್ದರು. (ಎಚ್.ಎನ್, ಎಂ.ಎನ್)

 

Leave a Reply

comments

Related Articles

error: