ಮನರಂಜನೆ

ಚೆಲುವಿನ ಚಿತ್ತಾರದ ಬೆಡಗಿಯ ವಿವಾಹ ಮೇ.12ಕ್ಕೆ

ಚೆಲುವಿನ ಚಿತ್ತಾರದ ಬೆಡಗಿ ನಟಿ ಅಮೂಲ್ಯ- ಜಗದೀಶ್ ಅವರ ಭರ್ಜರಿ ತಯಾರಿ ನಡೆದಿದ್ದು ಆಹ್ವಾನ ಪತ್ರಿಕೆ ಮುದ್ರಣವಾಗಿ ಸಂಬಂಧಿಕರ, ಆತ್ಮೀಯರ ಕೈಸೇರಿದೆ.

ಮೇ 11 ರಂದು ಚಪ್ಪರಶಾಸ್ತ್ರ ನಡೆಯಲಿದ್ದು, 12 ರಂದು ಮಂಡ್ಯ ಜಿಲ್ಲೆ ಬೆಳ್ಳೂರು ಕ್ರಾಸ್ ನ ಆದಿಚುಂಚನಗಿರಿಯಲ್ಲಿ ಮುಹೂರ್ತ ನೆರವೇರಲಿದೆ. ಈಗಾಗಲೇ ಮೊದಲ ಪತ್ರಿಕೆಯನ್ನು ದೇವರಿಗೆ ಅರ್ಪಿಸಿ, ಬಂಧು ಬಾಂಧವರಿಗೆ, ಆತ್ಮೀಯರಿಗೆ ಆಮಂತ್ರಣ ಹಂಚಿಕೆ ಮಾಡುತ್ತಿದ್ದಾರೆ. ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ, ಕುಟುಂಬದವರು, ಆತ್ಮೀಯರ ಸಮ್ಮುಖದಲ್ಲಿ ಅಮೂಲ್ಯ ಹಾಗೂ ಜಗದೀಶ್ ಸಪ್ತಪದಿ ತುಳಿಯಲಿದ್ದಾರೆ.  ಮೇ 16 ರಂದು ಕನಕಪುರ ರಸ್ತೆಯ ಶ್ರೀ ಕನ್ವೆನ್ಶನ್ ಸೆಂಟರ್ ನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು, ಮೇ 21 ರಂದು ಬೀಗರ ಔತಣಕೂಟ ಏರ್ಪಡಿಸಲಾಗಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: