ಮೈಸೂರು

‘ನೀನು ನಿನ್ನೊಳಗೆ ಖೈದಿ’ ಕೃತಿಗೆ ಅನುಷ್ ಎ.ಶೆಟ್ಟಿಗೆ ಸೃಜನಶೀಲ ಸಾಹಿತಿ ಪ್ರಶಸ್ತಿ

ಮೈಸೂರು,ಜ.13-ಅವ್ವ ಪುಸ್ತಕಾಲಯದಿಂದ ಮೈಸೂರಿನ ಅನುಷ್ ಎ.ಶೆಟ್ಟಿಗೆ ಸೃಜನಶೀಲ ಸಾಹಿತಿ ಪ್ರಶಸ್ತಿ ಲಭಿಸಿದೆ. ‘ನೀನು ನಿನ್ನೊಳಗೆ ಖೈದಿ’ ಕೃತಿಗೆ ಅನುಷ್ ಗೆ ಪ್ರಶಸ್ತಿ ಲಭಿಸಿದೆ.

ಅವ್ವ ಪುಸ್ತಕಾಲಯದಿಂದ ಆಯೋಜಿಸಿದ್ದ ‘2020ರ ಸೃಜನಶೀಲ ಸಾಹಿತಿ ಪ್ರಶಸ್ತಿ’ ಸ್ಪರ್ಧೆಯಲ್ಲಿ ಅನುಷ್ ಅವರ ‘ನೀನು ನಿನ್ನೊಳಗೆ ಖೈದಿ’ ಪ್ರಥಮ ಬಹುಮಾನಕ್ಕೆ ಆಯ್ಕೆಯಾಗಿದೆ. ಸುಧಾ ಆಡುಕಳ ಅವರ ‘ಬಕುಲದ ಬಾಗಿಲಿನಿಂದ’, ವಿ.ಗೋಪಕುಮಾರ್ ಅವರ ‘ವಿಜಯೀಭವ’ ಕೃತಿಗಳು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಬಹುಮಾನಕ್ಕೆ ಆಯ್ಕೆಯಾಗಿದೆ.

ಪ್ರಥಮ ಬಹುಮಾನ 2500 ರೂ. ಗಳ ಪುಸ್ತಕ ಬಹುಮಾನ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ದ್ವಿತೀಯ ಹಾಗೂ ತೃತೀಯ ಬಹುಮಾನವು 500 ರೂ.ಗಳ ಪುಸ್ತಕವನ್ನು ಒಳಗೊಂಡಿದೆ.

ತೀರ್ಪುಗಾರರ ಮೆಚ್ಚುಗೆ ಪಡೆದ ಪುಸ್ತಕಗಳು ಹಾಗೂ ಕೃತಿಕಾರರ ಹೆಸರು: ಬೆಳಕ ಹನಿ – ಜ್ಯೋತಿ ನಾಯ್ಕ, ನಂದಾದೀಪ – ಅನಘಾ ಶಿವರಾಮ್, ದಿಕ್ಸೂಚಿ – ಸಂತೋಷ್ ರಾವ್ ಪೆರ್ಮುಡ ಎಂ., ಒಂದು ಖಾಲಿ ಕುರ್ಚಿ – ವಿಜಯ್ ಕುಮಾರ್ ಹೂಗಾರ, ನಲಿವಿನ ನಾಲಗೆ – ಎಚ್.ಪಿ.ಸುಮಾ.

ಸಮಾಧಾನಕರ ಬಹುಮಾನ ಪಡೆದವರು: ಬೆಂಕಿ ಸಮುದ್ರದ ತಂಪು ಮೀನು – ಭರಮಣ್ಣ ಗುರಿಕಾರ್, ಶರಣೆಯರ ಚರಿತೆ – ಶ್ರೀಧರ ಗಂಗನ ಗೌಡರ, ಒಡಲಾಳದ ಧ್ವನಿ – ಉತ್ತಮ, ಪ್ರೇಮವಿರಾಗಿಯ ನಡುಗತ್ತಲ ಕವಿತೆ – ಕೃಷ್ಣಮೂರ್ತಿ ಜಿ. ಇಂಡ್ಲವಾಡಿ, ಹಾಣಾದಿ – ಕಪಿಲ ಪಿ. ಹುಮನಾಬಾದೆ, ಕನಸುಗಳ ಹೊತ್ತವರು – ಹುಲಿಯೂರುದುರ್ಗ ಲಕ್ಷ್ಮೀನಾರಾಯಣ, ಮಾವಿನಕೆರೆ – ಎಂ. ನರಸಿಂಹಲು ವಡವಾಟಿ.

ಮೆಚ್ಚುಗೆಯ ಹಾಗೂ ಸಮಾಧಾನಕರ ಪಡೆದವರಿಗೆ ಪುಸ್ತಕ ಬಹುಮಾನ ಹಾಗೂ ಇ-ಪ್ರಮಾಣ ಪತ್ರ ನೀಡಲಾಗುವುದು ಎಂದು ಅವ್ವ ಪುಸ್ತಕಾಲಯದ ಅಧ್ಯಕ್ಷ ನಾರಾಯಣ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: