
ಕರ್ನಾಟಕಪ್ರಮುಖ ಸುದ್ದಿಮೈಸೂರು
ಜನತೆಗೆ ಸುಗ್ಗಿ ಹಬ್ಬ ಸಂಕ್ರಾಂತಿಯ ಶುಭಾಶಯ ತಿಳಿಸಿದ ಸಚಿವ ಎಸ್.ಟಿ.ಸೋಮಶೇಖರ್
ಮೈಸೂರು/ಬೆಂಗಳೂರು,ಜ.13:- ಎಲ್ಲರಿಗೂ ಮಕರ ಸಂಕ್ರಾಂತಿಯ ಶುಭಾಶಯಗಳನ್ನು ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಮಾಧ್ಯಮ ಹೇಳಿಕೆ ನೀಡಿರುವ ಅವರು ದಕ್ಷಿಣಾಯಣದಿಂದ ಉತ್ತರಾಯಣ ಪುಣ್ಯಕಾಲ ಆರಂಭವಾಗುತ್ತಿದ್ದು, ಇದು ಸಮಸ್ತ ಜನತೆಗೂ ಒಳಿತನ್ನುಂಟು ಮಾಡಲಿ, ಕೊರೋನಾ-19ರ ಭಯ ದೂರವಾಗಿ, ಎಂದಿನ ಸಹಜ ಜೀವನಕ್ಕೆ ಜನತೆ ಹೊಂದಿಕೊಳ್ಳುವಂತಾಗಬೇಕು. ನಮಗೆ ಆಶಾದಾಯಕವಾಗಿ ಕೋವಿಡ್ ವ್ಯಾಕ್ಸಿನ್ ಸಹ ಬಂದಿದ್ದು, ದೇಶ ಹಾಗೂ ರಾಜ್ಯ ಸಂಪೂರ್ಣ ಕೊರೋನಾ ಮುಕ್ತವಾಗಲಿ ಎಂದಿದ್ದಾರೆ.
ಇದು ಸುಗ್ಗಿಯ ಹಬ್ಬವಾಗಿದೆ. ಸಂಕ್ರಾಂತಿ ಬಂತೆಂದರೆ ನಮ್ಮ ರೈತಾಪಿ ವರ್ಗಕ್ಕೆ ಸಂತಸದ ದಿನಗಳು ಪ್ರಾರಂಭವಾದಂತೆ. ಕೃಷಿಕರು ನಮ್ಮ ದೇಶದ ಬೆನ್ನೆಲುಬಾಗಿದ್ದು, ಅವರು ಸದಾ ಖುಷಿಯಾಗಿರಬೇಕು. ಅವರ ಋಣ ನಮ್ಮ ಮೇಲೆ ಸದಾ ಇರುತ್ತದೆ. ಅದನ್ನು ತೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ನಮ್ಮ ರೈತರಿಗೆ ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲವೆಂಬ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಲ್ಪಿಸಲು ನಮ್ಮ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಹಾಗೂ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ನೂತನ ಕೃಷಿ ಕಾಯ್ದೆಯನ್ನು ಜಾರಿಗೆ ತಂದಿದ್ದಾರೆ. ಈ ಮೂಲಕ ಅನೇಕ ಕಾಲದಲ್ಲಿ ಇದ್ದಂತಹ ತೊಡಕುಗಳನ್ನು ನಿವಾರಣೆ ಮಾಡಿದ್ದಾರೆ. ಅನ್ನದಾತ “ನನ್ನ ಬೆಳೆ, ನನ್ನ ಬೆಲೆ” ಎಂದು ಗರ್ವದಿಂದ ಹೇಳಿಕೊಳ್ಳುವ ಹಕ್ಕನ್ನು ಮರಳಿಸಿದ್ದಾರೆ. ರೈತರ ಬೆಳೆಗಳಿಗೆ ದುಪ್ಪಟ್ಟು ದರ ಸಿಗಬೇಕೆಂದು ನಮ್ಮ ಸರ್ಕಾರ ಸದಾ ಬದ್ಧವಾಗಿದೆ. ಈ ಸಂಕ್ರಮಣ ಕಾಲವು ಎಲ್ಲರಿಗೂ ಶುಭವನ್ನು ತಂದುಕೊಡಲಿ ಎಂದು ಈ ಮೂಲಕ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದಿದ್ದಾರೆ. (ಜಿ.ಕೆ,ಎಸ್.ಎಚ್)