
ಕರ್ನಾಟಕಪ್ರಮುಖ ಸುದ್ದಿ
ನ್ಯಾಯ ದೇವತೆ ತೀರ್ಪಿನಿಂದ ವಿಶ್ವನಾಥ್ ಗೆ ಸಚಿವ ಸ್ಥಾನ ಸಿಕ್ಕಿಲ್ಲ : ಸಾ.ರಾ.ಮಹೇಶ್
ರಾಜ್ಯ( ಚಾಮರಾಜನಗರ)ಜ.13:- ಅದಿದೇವತೆ ಶಾಪ, ನ್ಯಾಯ ದೇವತೆ ತೀರ್ಪಿನಿಂದ ವಿಶ್ವನಾಥ್ ಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಶಾಸಕ ಸಾ.ರಾ.ಮಹೇಶ್ ಹೆಸರು ಹೇಳದೆ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಚಾಮರಾಜನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಸಾಂವಿಧಾನಿಕ ತೀರ್ಪು ಹೊಂದಬಾರದು ಎಂಬ ಹೈಕೋರ್ಟ್ ತೀರ್ಪಿದ್ದರೂ ನೀವು ಪರಿಷತ್ ಸದಸ್ಯರಾಗಿರೋದು ತಪ್ಪು ಎಂದು ಹೇಳಿದರು.
ವಿಶ್ವನಾಥ್ ಅವರನ್ನು ನಲವತ್ತು ವರ್ಷ ಕಾಂಗ್ರೆಸ್ ಮದ್ವೆಯಾಗಿತ್ತು. ನಾವು ಕೂಡವಳಿ ಮಾಡ್ಕೊಂಡಿದ್ವಿ, ನೀವು ದಿನದ ವ್ಯಾಪಾರಕ್ಕೆ ತೆಗೆದುಕೊಂಡಿದ್ದೀರಿ, ನಿಮ್ಮ ಕತೆ ಏನಾಗುತ್ತೋ ಅಂತ ಬಿಜೆಪಿಗೆ ಎಚ್ಚರಿಸಿದ್ದೆ ಎಂದು ಪರೋಕ್ಷವಾಗಿ ವಿಶ್ವನಾಥ್ ಅವರನ್ನು ವೇಶ್ಯೆಗೆ ಹೋಲಿಸಿದರು.
ಈಗ ವಿಶ್ವನಾಥ್ ಕೋಗಿಲೆ ಅಲ್ಲ ಕಾಗೆ ಅನ್ನೋದು ರಾಜ್ಯದ ಜನತೆಗೆ ಗೊತ್ತಾಗಿದೆ.ರಾಜಕೀಯವಾಗಿ ಮೂಲೆಗುಂಪಾಗಿದ್ದ ವ್ಯಕ್ತಿಯನ್ನು ತನು,ಮನ, ಧನ ನೀಡಿ ಆಶ್ರಯ ಕೊಟ್ಟ ಜೆಡಿಎಸ್ ಗೆ ದ್ರೋಹ ಮಾಡಿದ್ದೀರಿ. ಜೆಡಿಎಸ್ ಕಾರ್ಯಕರ್ತರ ನಿಟ್ಟುಸಿರು ನಿಮ್ಮನ್ನ ಸುಮ್ಮನೆ ಬಿಡುತ್ತದಾ ಎಂದರು. (ಕೆ.ಎಸ್,ಎಸ್.ಎಚ್)