ಮೈಸೂರು

ಅಪರಾಧ ತಡೆ ಮಾಸಾಚರಣೆ ಸಮಾರೋಪ ಸಮಾರಂಭ : ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಬಹುಮಾನ ವಿತರಣೆ

ಮೈಸೂರು,ಜ.13:- ಮೈಸೂರು ನಗರ ಪೊಲೀಸ್ ಘಟಕದ ವತಿಯಿಂದ 2020ನೇ ಸಾಲಿನ ಡಿಸೆಂಬರ್ ಮಾಹೆಯನ್ನು ಅಪರಾಧ ತಡೆ ಮಾಸಾಚರಣೆಯನ್ನಾಗಿ ಅಚರಿಸಿದ್ದು, ಈ ಸಮಯದಲ್ಲಿ ಅಪರಾಧ ಪತ್ತೆ ಮತ್ತು ನಿಯಂತ್ರಣ ಸಂಬಂಧ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರಿಗೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಸಹ ನಡೆಸಲಾಗಿದೆ.
ಈ ಅಪರಾಧ ತಡೆ ಮಾಸಾಚರಣೆಯ ಸಮಾರೋಪ ಸಮಾರಂಭವನ್ನು ಇಂದು ನಗರ ಸಶಸ್ತ್ರ ಮೀಸಲು ಪಡೆ ಕಾವಾಯತು ಮೈದಾನದಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ 2020ನೇ ಸಾಲಿನಲ್ಲಿ ಸ್ವತ್ತು ಕಳುವು ಪ್ರಕರಣಗಳು ಮತ್ತು ಇತರೆ ಪ್ರಮುಖ ಪ್ರಕರಣಗಳ ಪತ್ತೆ ಸಂಬಂಧ ಹೆಚ್ಚಿನ ಪರಿಶ್ರಮ ವಹಿಸಿ ಉತ್ತಮ ಪತ್ತೆ ಕಾರ್ಯ ಮತ್ತು ಮಾಲುಗಳನ್ನು ಅಮಾನತ್ತು ಪಡಿಸಿಕೊಂಡ ನಗರದ ಒಬ್ಬರು ಪೊಲೀಸ್ ಇನ್ಸಪೆಕ್ಟರ್ ಸೇರಿದಂತೆ 14 ಸಿಬ್ಬಂದಿಯರುಗಳಿಗೆ ನಗರದ ಪೊಲೀಸ್ ಆಯುಕ್ತರಾದ ಡಾ. ಚಂದ್ರಗುಪ್ತ ಅವರು ಪ್ರಶಂಸನಾ ಪತ್ರ ಮತ್ತು ನಗದು ಬಹುಮಾನ ನೀಡಿ ಗೌರವಿಸಿದರು. ಬಳಿಕ ಮಾತನಾಡಿದ ಅವರು 2020ನೇ ಸಾಲಿನ ಪ್ರಾರಂಭದಲ್ಲಿ
ಕೋವಿಡ್ -19 ರೋಗಾಣು ಹರಡುವಿಕೆಯ ವಿಷಮ ಪರಿಸ್ಥಿತಿ ಉಂಟಾಗಿದ್ದು, ಇಂತಹ ಪರಿಸ್ಥಿತಿಯಲ್ಲಿಯೂ ಸಹ ನಗರದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರುಗಳು ಪ್ರಕರಣಗಳ ಪತ್ತೆ ಸಂಬಂಧ ಹೆಚ್ಚಿನ ಶ್ರಮವಹಿಸಿದ್ದು, ಹೊರ ಜಿಲ್ಲೆ , ಹೊರ ರಾಜ್ಯಗಳಿಗೆ ತೆರಳಿ ಆರೋಪಿಗಳನ್ನು ಪತ್ತೆ ಮಾಡಿ ಮಾಲುಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ. ಈ ಕಾರ್ಯದಲ್ಲಿ ಎಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರುಗಳು ಕರ್ತವ್ಯ ನಿರ್ವಹಿಸಿದ್ದು ಹೆಚ್ಚಿನ ಶ್ರಮ ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಈ ದಿನ ಪ್ರಶಂಸನಾ ಪತ್ರ ಮತ್ತು ನಗದು ಬಹುಮಾನವನ್ನು ನೀಡಲಾಗಿದೆ. ಇದೇ ರೀತಿ ಎಲ್ಲಾ ಠಾಣೆಯ
ಪೊಲೀಸರು ಒಂದುಗೂಡಿ ಕೆಲಸ ಮಾಡುವ ಮೂಲಕ ಜನರಿಗೆ ನೆಮ್ಮದಿಯನ್ನು ನೀಡುವ ಕಾರ್ಯವನ್ನು ಮಾಡಬೇಕೆಂದು ತಿಳಿಸಿದರು.
ಡಿಸಿಪಿ ಗೀತಪ್ರಸನ್ನ ಅವರು 2020ನೇ ಸಾಲಿನಲ್ಲಿ ಪತ್ತೆಯಾದ ಪ್ರಕರಣಗಳ ಮಾಹಿತಿ ಹಾಗೂ ಅಪರಾಧ
ತಡೆ ಮಾಸಾಚರಣೆಯಲ್ಲಿ ಕೈಗೊಂಡ ವಿಶೇಷ ಜಾಗೃತಿ ಕಾರ್ಯಕ್ರಮಗಳ ಮಾಹಿತಿಯನ್ನು ನೀಡಿದರು.
ಡಿಸಿಪಿ ಡಾ. ಎ.ಎನ್ ಪ್ರಕಾಶ್ ಗೌಡ ಮಾತನಾಡಿ ಅಪರಾಧ ತಡೆ ಮಾಸಾಚರಣೆಯಲ್ಲಿ ಎಲ್ಲರೂ
ಉತ್ಸಾಹದಿಂದ ಕರ್ತವ್ಯ ನಿರ್ವಹಿಸಿದ್ದು, ಪತ್ತೆ ಕಾರ್ಯಗಳನ್ನು ಸಹ ಮಾಡಿದ್ದು ಇದೇ ಉತ್ಸಾಹದಿಂದ ಮುಂದೆಯೂ ಸಹ ಕರ್ತವ್ಯ ನಿರ್ವಹಿಸುವಂತೆ ತಿಳಿಸಿದರು.
ಶಿವರಾಜು, ಕೆ.ಎ.ಆರ್.ಪಿ ಮೌಟೆಂಡ್ ಘಟಕದ ಕಮಾಡೆಂಟ್ ಎಂ.ಜಿ
ನಾಗರಾಜುರವರು ಉಪಸ್ಥಿತರಿದ್ದು, ಪೊಲೀಸ್ ಇನ್ಸ ಪೆಕ್ಟರ್ ಮೇಲ್ಪಟ್ಟ ನಗರ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

ಇದನ್ನೂ ಓದಿ

ಸ್ವತ್ತು ಕಳುವು ಪ್ರಕರಣಗಳ ಪತ್ತೆ ಕಾರ್ಯದಲ್ಲಿ ಉತ್ತಮ ಕಾರ್ಯ : ಅಧಿಕಾರಿ ಸಿಬ್ಬಂದಿಗಳ ಪಟ್ಟಿ ಬಿಡುಗಡೆ

Leave a Reply

comments

Related Articles

error: