ಮೈಸೂರು

ಜ.16 “ನಮ್ಮ ನಡಿಗೆ – ತ್ಯಾಜ್ಯ ಮುಕ್ತ ಕಡೆಗೆ” ವಿಶೇಷ ಜಾಗೃತಿ ಕಾರ್ಯಕ್ರಮ

ಮೈಸೂರು. ಜ .13 :- ಜಿಲ್ಲಾ ಪಂಚಾಯಿತಿ ವತಿಯಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮತ್ತು ವಿವಿಧ ಸಂಘ-ಸAಸ್ಥೆಗಳ ಸಹಭಾಗಿತ್ವದಲ್ಲಿ ಶುಚಿತ್ವದ ಕುರಿತು ಸಾರ್ವಜನಿಕ ಜಾಗೃತಿ ಮೂಡಿಸುವ “ನಮ್ಮ ಗ್ರಾಮ ನಮ್ಮ ಜವಬ್ದಾರಿ” ಎಂಬ ಉದ್ದೇಶದಿಂದ “ನಮ್ಮ ನಡಿಗೆ – ತ್ಯಾಜ್ಯ ಮುಕ್ತ ಕಡೆಗೆ” ಎಂಬ ವಿಶೇಷ ಜಾಗೃತಿ ಆಂದೋಲನವನ್ನು ಜನವರಿ 16 ರಿಂದ ಫೆಬ್ರವರಿ 15ರ ವರೆಗೆ ಹಮ್ಮಿಕೊಳ್ಳಲಾಗಿದೆ.
ಶುಚಿತ್ವದ ಬಗ್ಗೆ ಜಾಗೃತಿ ಮೂಡಿಸಲು ಎಲ್ಲಾ ಗ್ರಾಮಗಳ ಬೀದಿ, ಚರಂಡಿ, ಶಾಲೆ, ಅಂಗನವಾಡಿಆವರಣಗಳಲ್ಲಿ ಸ್ವಚ್ಛತಾ ಶ್ರಮದಾನ, ಮನೆ ಹಂತದಲ್ಲೇ ಹಸಿ-ಒಣ ಕಸ ವಿಂಗಡಣೆ, ತಿಪ್ಪೆಗುಂಡಿ ನಿರ್ವಹಣೆ, ಹಸಿ ತ್ಯಾಜ್ಯವನ್ನು ಗೊಬ್ಬರವನ್ನಾಗಿಸುವ ವಿಧಾನಗಳ ಬಗ್ಗೆ ಮಾಹಿತಿ ನೀಡುವುದು, ಕ್ರಿಯಾತ್ಮಕ ಪೋಸ್ಟರ್ ಅಥವಾ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು, ಮನೆಮನೆ ಭೇಟಿ ಹಾಗೂ ಸ್ಥಳೀಯ ಮಾಧ್ಯಮಗಳ ಮೂಲಕ ಪ್ರಚಾರ ಮಾಡುವುದೂ ಸೇರಿದಂತೆ ಇನ್ನಿತರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಾದ ಸ್ವಚ್ಛತೆ ಕುರಿತು ಡಂಗೂರ ಸಾರುವುದು, ಜಾಥಾ ಶ್ರಮದಾನ, ಬಯಲು ಬಹಿರ್ದೆಶೆ ಕೈಗೊಳ್ಳುವಂತಹ ಕುಟುಂಬಗಳನ್ನು ಗುರುತಿಸಿ ಶೌಚಾಲಯ ಬಳಸುವಂತೆ ಪ್ರೇರೇಪಿಸಲಾಗುವುದು.
ಈ ವಿಶೇಷ ಆಂದೋಲನದ ಕಡೇ ವಾರದಲ್ಲಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನಿಡಿ, ಉತ್ಪತ್ತಿಯಾಗುವ ತ್ಯಾಜ್ಯವನ್ನು ಮೂಲದಲ್ಲಿಯೇ ಹಸಿ ಮತ್ತು ಒಣ ತ್ಯಾಜ್ಯವನ್ನಾಗಿ ವಿಂಗಡಿಸುವುದರ ಅಥವಾ ನಿಗಾವಹಿಸಿ ನಿಯಾಮಾನುಸಾರ ಕ್ರಮ ಕೈಗೊಳ್ಳುತ್ತಿರುವರೇ ಎಂಬುದರ ಬಗ್ಗೆ ಗ್ರಾಮದ ಜನರ ನಡತೆಯಲ್ಲಿ ಉಂಟಾಗುವ ಬದಲಾವಣೆಯ ಬಗ್ಗೆ ಅಂಕಿ-ಅAಶಗಳನ್ನು ಕ್ರೂಢೀಕರಿಸಿ ಜಿಲ್ಲಾ ಪಂಚಾಯಿತಿಗೆ ವರದಿ ಸಲ್ಲಿಸಲಾಗುವುದಲ್ಲದೆ ವರದಿಯನ್ನಾಧರಿಸಿ ಉತ್ತಮ ಅಭ್ಯಾಸವನ್ನು ರೂಢಿಸಿಕೊಳ್ಳಲು ತಿಳಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

comments

Related Articles

error: