ಮೈಸೂರು

ಮೃಗಾಲಯದ ಪ್ರಾಣಿ ಪಕ್ಷಿಗಳ ದತ್ತು ಸ್ವೀಕಾರ

ಮೈಸೂರು, ಜ.13 :- ಮೈಸೂರು ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಡಿಯಲ್ಲಿ ಮೈಸೂರಿನ ಡಾ.ರೂಪ .ಎಸ್. ಅವರು 50,000 ರೂ.ಗಳನ್ನು ಪಾವತಿಸಿ “ಜೀಬ್ರ”ವನ್ನು 1 ವರ್ಷದ ಅವಧಿಗೆ ದತ್ತು ಪಡೆದಿರುತ್ತಾರೆ.
ಬೆಂಗಳೂರಿನ ನಾಗೇಂದ್ರ ಅವರು 2000 ರೂ.ಗಳನ್ನು ಪಾವತಿಸಿ “ಬಡ್ಜರಿಗಾರ್ ಮತ್ತು ಲವ್ ಬಡ್ರ್ಸ”ಅನ್ನು ಹಾಗೂ ಮೈಸೂರಿನ ಅಕ್ಷತ ಪ್ರಸಾದ್ ಎಂ.ಡಿ ಅವರು 2000 ರೂ. ಪಾವತಿಸಿ “ಇಂಡಿಯನ್ ಸಾಫ್ಟ್ ಶೆಲ್ ಟರ್ಟಲ್”ಅನ್ನು 1 ವರ್ಷದ ಅವಧಿಗೆ ದತ್ತು ಪಡೆದಿರುತ್ತಾರೆ.
ಬೆಂಗಳೂರಿನ ಸಿ.ಪುಟ್ಟಯ್ಯ ಅವರು 7,000 ರೂ.ಗಳನ್ನು ಪಾವತಿಸಿ “ನವಿಲು”ಅನ್ನು 2 ವರ್ಷಗಳ ಅವಧಿಗೆ, ರೂಪ ಜಿ. ಅವರು 20,000 ರೂ ಪಾವತಿಸಿ 1 ವರ್ಷದ ಅವದಿಗೆ “ಇಂಡಿಯನ್ ಗ್ರೇ ಫುಲ್” ಅನ್ನು 1 ವರ್ಷದ ಅವಧಿಗೆ ಮತ್ತು ಚಿರಾಗ್ ಅವರು 3,500 ರೂ. ಪಾವತಿಸಿ 1 ವರ್ಷದ ಅವಧಿಗೆ “ಕಾಳಿಂಗ ಸರ್ಪ”ವನ್ನು ದತ್ತು ಪಡೆದಿರುತ್ತಾರೆ.
ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಪ್ರಾಣಿಗಳ ಸಂರಕ್ಷಣೆ ಹಾಗೂ ಮೃಗಾಲಯ ನಿರ್ವಹಣೆಗೆ ಕೈ ಜೋಡಿಸಿದ ಎಲ್ಲರಿಗೂ ಮೃಗಾಲಯವು ಅಭಿನಂದಿಸುತ್ತದೆ ಎಂದು ಮೃಗಾಲಯದ ಕಾರ್ಯನಿರ್ವಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: