ಮೈಸೂರು

ವ್ಯಕ್ತಿಯೋರ್ವರ ಮೇಲೆ ಆಟೋ ಹರಿಸಿ ಕೊಲೆ ಮಾಡಿದ್ದ ಇಬ್ಬರ ಬಂಧನ

ಮೈಸೂರು,ಜ.14:- ವ್ಯಕ್ತಿಯೋರ್ವರ ಮೇಲೆ ಆಟೋ ಹರಿಸಿ ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಎನ್.ಆರ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಮೈಸೂರಿನ ಬಿ.ಎಂ.ಶ್ರೀ ನಗರದ ಶ್ರೀಧರ್, ಗೋವಿಂದರಾಜು ಎಂದು ಗುರುತಿಸಲಾಗಿದೆ. ರಸ್ತೆ ಬದಿ ನಿಂತಿದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಆಟೋ ಹತ್ತಿಸಿ ಕೊಲೆಮಾಡಿದ್ದರು.

ಆಟೋ ಹತ್ತಿಸಿ ಕೊಲೆ ಮಾಡಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸಿಸಿಟಿವಿ ಫೂಟೇಜ್ ಆಧರಿಸಿ ಎನ್.ಆರ್ ಠಾಣೆಯ ಇನ್ ಸ್ಪೆಕ್ಟರ್ ಅಜರುದ್ದೀನ್ ಮತ್ತು ತಂಡ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರ ವಿಚಾರಣೆ ಸಂದರ್ಭ ಕುಡಿದ ಮತ್ತಿನಲ್ಲಿ ಹಣಕಾಸಿನ ವಿಚಾರವಾಗಿ ಚಾಲಕನಾದ ಮಲ್ಲಿಕಾರ್ಜುನನೊಂದಿಗೆ ಆತನ ಸ್ನೇಹಿತ ಶ್ರೀಧರ್ ಜಗಳವಾಡಿದ್ದ. ಈ ದ್ವೇಷದಿಂದ ಶ್ರೀಧರ್ ಮತ್ತೋರ್ವ ಸ್ನೇಹಿತ ಗೋವಿಂದರಾಜು ಕರೆಸಿ ಮಲ್ಲಿಕಾರ್ಜುನನ್ನು ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ.

ಪ್ರಕರಣ ದಾಖಲಿಸಿಕೊಂಡಿರುವ ಎನ್.ಆರ್ ಪೊಲೀಸರು ಬಂಧಿತರನ್ನು ವಿಚಾರಣೆಗೊಳಪಡಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: