
ಕರ್ನಾಟಕಪ್ರಮುಖ ಸುದ್ದಿಮೈಸೂರು
ಮುನಿರತ್ನ ಗೆ ಸಚಿವ ಸ್ಥಾನ ಕೊಡಲು ಸಾಧ್ಯವಾಗುವುದಿಲ್ಲ ಎಂದಿದ್ದರೆ ಪಕ್ಷಕ್ಕೆ ಯಾಕೆ ಸೇರಿಸಿಕೊಂಡ್ರಿ ; ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ
ಮೈಸೂರು,ಜ.14:- ಮುನಿರತ್ನ ಗೆ ಸಚಿವ ಸ್ಥಾನ ಕೊಡಲು ಸಾಧ್ಯವಾಗುವುದಿಲ್ಲ ಎಂದಿದ್ದರೆ ಯಾಕೆ ಅವರನ್ನು ಪಕ್ಷಕ್ಕೆ ಸೇರಿಸಿ ಕೊಂಡ್ರಿ? ಯಾಕೆ ಅವರಿಗೆ ಸಚಿವರಾಗಿ ಮಾಡುತ್ತೇವೆ ಅಂತ ಭರವಸೆ ಕೊಟ್ರಿ?
ಕೋರ್ಟ್ ಕೇಸ್ ಇರೋದು ತಮಗೆ ಮೊದಲೆ ಗೊತ್ತಿರಲಿಲ್ವಾ? ಇನ್ನೊಂದು ಕಡೆ ಈ ವಿಶ್ವನಾಥ್ ಕೂಡ ಬಾಯಿ ಬಡಿದು ಕೊಂಡು ಓಡಾಡುತ್ತಿದ್ದಾನೆ ಎಂದು ಮಕಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
ಮೈಸೂರಿನಲ್ಲಿಂದು ಮಾಧ್ಯಮಗಳಿಗೆ ಸಿಡಿ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ಬ್ಲ್ಯಾಕ್ ಮೇಲ್ ವಿಚಾರಕ್ಕೆ ಪ್ರತಿಕ್ರಿಯಿಸಿ ಸುಲಭವಾಗಿ ಎಲ್ಲರಿಗೂ ಬ್ಲ್ಯಾಕ್ ಮೇಲ್ ಮಾಡಲು ಸಾಧ್ಯವಿಲ್ಲ. ವೀಕ್ ಸಿಎಂ ಇದ್ದರೆ ಮಾತ್ರ ಈ ರೀತಿ ಮಾಡಲು ಸಾಧ್ಯ ಎಂದರು. ಬ್ಲಾಕ್ ಮೇಲ್ ಮಾಡಿದ್ದರೆ
ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಿ. ಯಾವ ಪಕ್ಷದವರಾದರೂ ಸರಿ ದೂರು ನೀಡಲಿ. ಅವರ ಪಕ್ಷದವರೇ ಆರೋಪ ಮಾಡಿರುವುದರಿಂದ ಇದರಲ್ಲಿ ಸತ್ಯ ಇದೆ ಅನಿಸುತ್ತಿದೆ. ನಾವು ಮಾಡಿದರೆ ವಿರೋಧ ಪಕ್ಷದವರು ಆರೋಪ ಮಾಡಿದರು ಅನ್ನುತ್ತಾರೆ. ಈ ಬಗ್ಗೆ ದೂರು ನೀಡಲಿ ಸತ್ಯ ಹೊರಗೆ ಬರಲಿ.ಸಿಎಂ ಒತ್ತಡದಲ್ಲಿದ್ದಾರೋ ತಾಪದಲ್ಲಿದ್ದಾರೋ ಗೊತ್ತಿಲ್ಲ ಎಂದರು.
ಯಡಿಯೂರಪ್ಪ ಸರ್ಕಾರದಲ್ಲಿ ಕುಟುಂಬ ರಾಜಕಾರಣ ವಿಚಾರಕ್ಕೆ ಪ್ರತಿಕ್ರಿಯಿಸಿ ಇದನ್ನು ಹಿಂದೆಯೇ ನಾನು ಹೇಳಿದ್ದೆ ರಾಜ್ಯದಲ್ಲಿ ಇಬ್ಬರು ಸಿಎಂ ಇದ್ದಾರೆ. ಅವರ ಕುಟುಂಬದ ಖಾತೆಗೆ 7 ಕೋಟಿ 40 ಲಕ್ಷ ಜಮಾ ಆಗಿದ್ದು ಇದರಿಂದಲೇ ಗೊತ್ತಾಗುತ್ತದೆ. ಕುಟುಂಬದ ರಾಜಕಾರಣ ಇದೆ.ಈ ಎಲ್ಲಾ ಬೆಳವಣಿಗೆಯಿಂದ ಜನ ಬೇಸತ್ತಿದ್ದಾರೆ ಎಂದರು.
ನಾಯಕತ್ವ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ ಅದು ಇಲ್ಲದಿದ್ದರೆ ಏಕೆ ಸಚಿವ ಸಂಪುಟ ವಿಸ್ತರಣೆಗೆ ಇಷ್ಟು ದಿನ ಆಯ್ತು ? ಕೈ ಕಾಲು ಕಟ್ಟಿ ಗೋಗರೆದು ವಿಸ್ತರಣೆ ಮಾಡಿದರು.ನಾಗೇಶ್ ಸಚಿವ ಸ್ಥಾನ ಕೈ ಬಿಟ್ಟಿದ್ದಕ್ಕೆ ಕಾರಣ ಕೊಟ್ಟಿಲ್ಲ.ಅವರು ಸರ್ಕಾರ ಬರಲು ಆಪರೇಷನ್ ಕಮಲಕ್ಕೆ ಒಳಗಾಗಿದ್ದರು.ಮುನಿರತ್ನರನ್ನು ಸಚಿವರನ್ನಾಗಿ ಮಾಡಲು ಸಾಧ್ಯವಿಲ್ಲ ಅಂದ ಮೇಲೆ ಏಕೆ ಅವರನ್ನು ಕರೆದುಕೊಳ್ಳಬೇಕಾಗಿತ್ತು ?, ಇತ್ತ ವಿಶ್ವನಾಥ್ ಬಾಯಿ ಬಡಿದುಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. (ಕೆ.ಎಸ್,ಎಸ್.ಎಚ್)