
ಮೈಸೂರು
ʻಸಂಕ್ರಾಂತಿ ಹಾಗೂ ಕೊರೋನಾ ಲಸಿಕೆಗೆʼ ಅದ್ಧೂರಿ ಸ್ವಾಗತ ಕೋರಿದ ಮೈಸೂರು ಜನತೆ
ಮೈಸೂರು,ಜ.14:- ʻಕೊರೋನಾ ಆಗಲಿ ಭೂಗತ… ವ್ಯಾಕ್ಸಿನ್ಗೆ ಸಂಕ್ರಾಂತಿಯ ಸುಸ್ವಾಗತ..ʼ ಎಲ್ಲರೂ ಮಕರ ಸಂಕ್ರಾಂತಿ ಜೊತೆಗೆ ಕೊರೋನಾ ಲಸಿಕೆಯ ಆಗಮನದ ಸಂಭ್ರಮದಲ್ಲಿದ್ದಾರೆ. ರಸ್ತೆಯಲ್ಲಿ ಚಿತ್ತಾಕರ್ಷಕ ರಂಗೋಲಿ ಬಿಟ್ಟು ʻಸಂಕ್ರಾಂತಿ ಹಾಗೂ ಕೊರೋನಾ ಲಸಿಕೆಗೆʼ ಅದ್ಧೂರಿ ಸ್ವಾಗತ ಕೋರಿದ್ದಾರೆ.
ನಗರದ ಜನತಾನಗರದ ಅಯ್ಯಪ್ಪಸ್ವಾಮಿ ದೇವಾಲಯದ ಮುಂಭಾಗ ʻದೂರಾಗಲಿ ಕೊರೊನಾ ಸಂಕಟ… ಸಂಕ್ರಾಂತಿ ತರಲಿ ಸುಗ್ಗಿಯೂಟʼ ಎಂದು ರಂಗೋಲಿ ಬಿಡಿಸಿ ಒಳ್ಳೆಯ ನಿರೀಕ್ಷೆಗಳನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.
ಸುಗ್ಗಿಯ ಹಬ್ಬ ಎಲ್ಲರಿಗೂ ನೆಮ್ಮದಿ ಜೀವನ ತರಲಿ. ಕೊರೋನಾ ದೂರಾಗಲಿ ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ. (ಕೆ.ಎಸ್,ಎಸ್.ಎಚ್)